Wednesday, June 3, 2026
Homeಕರಾವಳಿಉಡುಪಿಉಡುಪಿ: ಉದ್ಯಮಿಯ ಅಪಹರಣ, ದರೋಡೆ ಪ್ರಕರಣ- ಮೂವರು ಆರೋಪಿಗಳ ಬಂಧನ

ಉಡುಪಿ: ಉದ್ಯಮಿಯ ಅಪಹರಣ, ದರೋಡೆ ಪ್ರಕರಣ- ಮೂವರು ಆರೋಪಿಗಳ ಬಂಧನ

- Advertisement -
- Advertisement -

ಉಡುಪಿ: ಜುಲೈ 17 ರಂದು ಉಡುಪಿ ನಗರದಲ್ಲಿ ಉದ್ಯಮಿ ಅಶೋಕ್ ಕುಮಾರ್ ಎಂಬವರನ್ನು ಅಪಹರಿಸಿ ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಗಳನ್ನು ಉಡುಪಿ ನಗರ ಪೊಲೀಸರು ಬಂಧಿಸಿದ್ದಾರೆ.

ಸಂತೋಷ, ಅನಿಲ್ ಪೂಜಾರಿ ಮತ್ತು ಮಣಿಕಂಠ ಖಾರ್ವಿ ಬಂಧಿತರು.ಇವರನ್ನು ಕಟಪಾಡಿ ಜಂಕ್ಷನ್‌ ಬಳಿ ವಶಕ್ಕೆ ಪಡೆದು ಕೃತ್ಯಕ್ಕೆ ಬಳಸಿದ ಪಿಸ್ತೂಲ್, ತಲವಾರುಗಳು ಹಾಗೂ ದೂರುದಾರ ಅಶೋಕ್ ಕುಮಾರ್ ರಿಂದ ಸುಲಿಗೆ ಮಾಡಿದ 1,35,000 ರೂ ನಗದು ಹಾಗೂ ಮೊಬೈಲ್ ನ್ನು ವಶಕ್ಕೆ ಪಡೆಯಲಾಗಿದೆ.

ಆರೋಪಿಗಳ ಮೇಲೆ ಕಾಪು, ಕಾರ್ಕಳ ಗ್ರಾಮಾಂತರ,ಸುಬ್ರಮಣ್ಯ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿರುತ್ತವೆ. ಈ ಕೃತ್ಯದಲ್ಲಿ ಇನ್ನೂ ಹಲವು ಆರೋಪಿಗಳು ಭಾಗಿಯಾಗಿದ್ದು ಅವರನ್ನು ಬಂಧಿಸಲು ಉಡುಪಿ ನಗರ ಠಾಣೆ ಪೊಲೀಸರು ಬಲೆ ಬೀಸಿದ್ದಾರೆ.

- Advertisement -

Latest News

error: Content is protected !!