Tuesday, July 1, 2025
Homeಕರಾವಳಿಪರಿಶಿಷ್ಟ ಪಂಗಡಕ್ಕೆ ವಿಶ್ವಕರ್ಮ ಸಮುದಾಯವನ್ನು ಸೇರಿಸಿದರೆ ಉಗ್ರ ಹೋರಾಟ: ಶ್ಯಾಮರಾಜ್‌ ಬಿರ್ತಿ

ಪರಿಶಿಷ್ಟ ಪಂಗಡಕ್ಕೆ ವಿಶ್ವಕರ್ಮ ಸಮುದಾಯವನ್ನು ಸೇರಿಸಿದರೆ ಉಗ್ರ ಹೋರಾಟ: ಶ್ಯಾಮರಾಜ್‌ ಬಿರ್ತಿ

spot_img
- Advertisement -
- Advertisement -

ಉಡುಪಿ: ಪರಿಶಿಷ್ಟ ಪಂಗಡಕ್ಕೆ ವಿಶ್ವಕರ್ಮ ಸಮುದಾಯ ಸೇರಬಾರದು. ಒಂದು ವೇಳೆ ಸೇರಿದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ದಸಂಸ) ಉಡುಪಿ ಜಿಲ್ಲಾ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ ಎಚ್ಚರಿಕೆ ನೀಡಿದ್ದಾರೆ.

ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, “ ಪ್ರಸ್ತುತ ಸಮಾಜದಲ್ಲಿ ಅತಿ ಹೆಚ್ಚು ಅಸ್ಪೃಶ್ಯತೆಯನ್ನು ಆಚರಿಸುವ ಸಮುದಾಯಗಳಲ್ಲಿ ವಿಶ್ವಕರ್ಮ ಸಮುದಾಯವೂ ಒಂದು. ಯಾವ ಕಾರಣಕ್ಕೂ ಆ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬಾರದು. ಇನ್ನು ಅವರು ತಮ್ಮನ್ನು ತಾವು ಅತೀ ಮೇಲ್ವರ್ಗದವರೆಂದು ತೋರಿಸಕೊಳ್ಳಲು ಬ್ರಾಹ್ಮಣರು ಬಳಸುವ ಉಪನಾಮ ‘ಆಚಾರ್ಯ’ ಎಂಬ ಪದವನ್ನು ‘ಆಚಾರಿ’ ಎಂಬ ಪದದ ಬದಲಿಗೆ ಬಳಸುತ್ತಿದ್ದಾರೆ” ಎಂದು ಅವರು ಹೇಳಿದ್ದಾರೆ.

ಇನ್ನು ” ವಿರ್ಶವಕರ್ಮ ಸಮುದಾಯವೂ ಇಂದಿಗೂ ದಲಿತರು, ತಳಸಮುದಾಯವರನ್ನು ತಮ್ಮ ಅಂಗಳಕ್ಕೂ ಬಿಟ್ಟುಕೊಳ್ಳುವುದಿಲ್ಲ. ನನ್ನ ಬಾಲ್ಯದ ದಿನಗಳಲ್ಲಿ ನಾವು ರಸ್ತೆಯಲ್ಲಿ ನಡೆದುಕೊಂಡು ಬರುತ್ತಿರುವಾಗ, ರಸ್ತೆ ಬಿಟ್ಟು ಚರಂಡಿ ಬದಿಯಲ್ಲಿ ನಿಂತು ನಾವು ಮುಂದೆ ಸಾಗಿದ ನಂತರ ರಸ್ತೆಯಲ್ಲಿ ಹೋಗುತ್ತಿದ್ದರು. ಪ್ರಸ್ತುತಕ್ಕೂ ನಮ್ಮನ್ನು ಈ ಸಮಾಜದಲ್ಲಿ ತುಚ್ಚರಂತೆ ನಡೆಸಿಕೊಂಡು ಬರುತ್ತಿದ್ದಾರೆ” ಎಂದು ಅವರು ಆರೋಪಿಸಿದ್ದಾರೆ.

“ಕೇವಲ ಮೀಸಲಾತಿಗಾಗಿ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಬೇಕೆಂದು ಅವರು ಆಗ್ರಹಿಸುತ್ತಿದ್ದಾರೆ. ಇಲ್ಲವಾದಲ್ಲಿ ನಮ್ಮ ಪರಿಶಿಷ್ಟ ಪಂಗಡದ ಮಕ್ಕಳನ್ನು ಮದುವೆಯಾಗಲು ಆ ಸಮುದಾಯವರು ತಯಾರಿದ್ದಾರೆ ಎಂಬುದನ್ನು ಸಾರ್ವಜನಿಕವಾಗಿ ಸ್ಪಷ್ಟಪಡಿಸಬೇಕು” ಎಂದು ಅವರು ಒತ್ತಾಯಿಸಿದ್ದಾರೆ.

- Advertisement -
spot_img

Latest News

error: Content is protected !!