Wednesday, June 24, 2026
Homeಕರಾವಳಿಉಡುಪಿಉಡುಪಿ; ಮನೆಗೆ ನುಗ್ಗಿ ಸುಮಾರು 60 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ

ಉಡುಪಿ; ಮನೆಗೆ ನುಗ್ಗಿ ಸುಮಾರು 60 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ

- Advertisement -
- Advertisement -

ಉಡುಪಿ; ಮನೆಗೆ ನುಗ್ಗಿ ಸುಮಾರು 60 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿರುವ ಘಟನೆ ಹೆಬ್ರಿಯಲ್ಲಿ ನಡೆದಿದೆ.

ಮನೆ ಮಾಲಕಿ ಕೀರ್ತನ ಪ್ರಭು (34) ಅವರು ಮೇ 24ರಂದು ಬೆಳಿಗ್ಗೆ 6:45ರ ಸುಮಾರಿಗೆ ಎದ್ದು ನೋಡಿದಾಗ ಮನೆಯ ಹಿಂಭಾಗ ಹಾಗೂ ಎದುರಿನ ಬಾಗಿಲುಗಳು ತೆರೆದಿರುವುದು ಗಮನಕ್ಕೆ ಬಂದಿದೆ. ಹಾಲ್ ಬಳಿ ಇದ್ದ ಗಾಡ್ರೇಜ್ ಬಾಗಿಲು ಸಹ ತೆರೆದಿರುವುದನ್ನು ಕಂಡು ಅನುಮಾನಗೊಂಡ ಅವರು ಮೊದಲ ಮಹಡಿಯ ಮಲಗುವ ಕೋಣೆಗೆ ತೆರಳಿ ಪರಿಶೀಲಿಸಿದಾಗ, ಅಲ್ಲಿದ್ದ ಕಬ್ಬಿಣದ ಗಾಡ್ರೇಜ್ ಲಾಕರ್‌ ಕೂಡ ಮುರಿದು ತೆರೆದಿರುವುದು ಪತ್ತೆಯಾಗಿದೆ.

ಕಳ್ಳರು ಮನೆಯ ಹಿಂಭಾಗದ ಕಿಟಕಿಯ ಚಿಲಕದ ಕೊಂಡಿಯನ್ನು ಮೀಟಿ ಒಳನುಗ್ಗಿ, ಮೊದಲ ಮಹಡಿಯಲ್ಲಿ ಇರಿಸಿದ್ದ ಚಿನ್ನಾಭರಣ, ಬೆಳ್ಳಿ ವಸ್ತುಗಳು ಸೇರಿದಂತೆ ಇತರ ಬೆಲೆಬಾಳುವ ಸಾಮಗ್ರಿಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ತಿಳಿದುಬಂದಿದೆ. ಕಳುವಾದ ವಸ್ತುಗಳ ಒಟ್ಟು ಮೌಲ್ಯ ಸುಮಾರು 59 ಲಕ್ಷ 97 ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದ

ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

- Advertisement -

Latest News

error: Content is protected !!