Friday, June 26, 2026
Homeಕರಾವಳಿಉಡುಪಿಉಡುಪಿಯ ಯುವತಿಗೆ ಒಲಿದ ಭುವನ ಸುಂದರಿ ಮೂರನೇ ರನ್ನರ್ ಅಪ್ ಪ್ರಶಸ್ತಿ

ಉಡುಪಿಯ ಯುವತಿಗೆ ಒಲಿದ ಭುವನ ಸುಂದರಿ ಮೂರನೇ ರನ್ನರ್ ಅಪ್ ಪ್ರಶಸ್ತಿ

- Advertisement -
- Advertisement -

ಫ್ಲೋರಿಡಾ: ಅಮೆರಿಕದ ಫ್ಲೋರಿಡಾದಲ್ಲಿ ನಡೆದ 69ನೇ ಭುವನ ಸುಂದರಿ ಸ್ಪರ್ಧೆಯಲ್ಲಿ ಉಡುಪಿಯ ಉದ್ಯಾವರದ ಯುವತಿ ಆಯಡ್ಲಿನ್ ಕ್ಯಾಸ್ತಲಿನೊ(22ವರ್ಷ) ಮೂರನೇ ರನ್ನರ್ ಅಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಉದ್ಯಾವರದ ಕೊರಂಗ್ರಪಾಡಿಯ ನಿವಾಸಿಯಾಗಿರುವ ಆಲ್ಫೋನ್ಸ್ ಕ್ಯಾಸ್ತಲಿನೊ ಮತ್ತು ಮೀರಾ ಕ್ಯಾಸ್ತಲಿನೊ ದಂಪತಿ ಪುತ್ರಿ ಆಯಡ್ಲಿನ್ ವಾಣಿಜ್ಯ ನಗರಿ ಮುಂಬಯಿಯಲ್ಲಿ ನಡೆದ ಲಿವಾ ಮಿಸ್ ದಿವಾ ಯೂನಿವರ್ಸ್ 2020 ಸ್ಪರ್ಧೆಯಲ್ಲಿ ಜಯಶಾಲಿಯಾಗುವ ಮೂಲಕ ಪ್ರಶಸ್ತಿಯನ್ನು ಪಡೆದಿದ್ದರು.

ಮೇ 16ರಂದು ಫ್ಲೋರಿಡಾದಲ್ಲಿ ನಡೆದ ಮಿಸ್ ಯೂನಿವರ್ಸ್ ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಮೆಕ್ಸಿಕೋದ ಆಯಂಡ್ರಿಯಾ ಮೆಝೆ ಭುವನ ಸುಂದರಿ ಕಿರೀಟವನ್ನು ತನ್ನ ಮುಡಿಗೇರಿಸಿಕೊಂಡಿದ್ದರು. ಬ್ರೆಜಿಲ್ ನ ಗಾಮಾ ಮೊದಲ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದು, ಪೆರುವಿನ ಜೆನಿಕ್ ಮಸೆಟಾ ಎರಡನೇ ರನ್ನರ್ ಅಪ್ ಸ್ಥಾನ ಪಡೆದಿದ್ದರು. ಭಾರತದಿಂದ ಸ್ಪರ್ಧಿಸಿದ್ದ ಉಡುಪಿ ಮೂಲದ ಆಯಡ್ಲಿನ್ ಮೂರನೇ ರನ್ನರ್ ಅಪ್ ಸ್ಥಾನ ಪಡೆದಿದ್ದರು.

ಮಿಸ್ ಯೂನಿವರ್ಸ್ ಪ್ರಶಸ್ತಿ ಗೆದ್ದ ಮೆಕ್ಸಿಕೋದ ಆಯಂಡ್ರಿಯಾ ಮೆಝಾಗೆ ಕಳೆದ ಬಾರಿಯ ಮಿಸ್ ಯೂನಿವರ್ಸ್ ಆಗಿ ಹೊರಹೊಮ್ಮಿದ್ದ ದಕ್ಷಿಣ ಆಫ್ರಿಕಾದ ಜೊಜಿಬಿನಿ ತುಂಜಿ ಕಿರೀಟ ತೊಡಿಸಿದ್ದರು.

- Advertisement -

Latest News

error: Content is protected !!