Tuesday, May 14, 2024
Homeಕರಾವಳಿಉಡುಪಿಮಣಿಪಾಲ: ಅಪಾಯದಲ್ಲಿರುವ ಬಹುಮಹಡಿ ಕಟ್ಟಡವನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ

ಮಣಿಪಾಲ: ಅಪಾಯದಲ್ಲಿರುವ ಬಹುಮಹಡಿ ಕಟ್ಟಡವನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ

spot_img
- Advertisement -
- Advertisement -

ಉಡುಪಿ: ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಅಬ್ಬರಿಸುತ್ತಿರುವ ಭಾರೀ ಮಳೆಯ ಪರಿಣಾಮ ಮಣಿಪಾಲದ ಕುಂಡೇಲುಕಾಡಿನ ಗುಡ್ಡ ಜರಿದಿದ್ದು, ಅಲ್ಲೇ ಸಮೀಪದಲ್ಲಿರುವ ಬಹುಮಹಡಿ ಕಟ್ಟಡವೊಂದು ಅಪಾಯದ ಸ್ಥಿತಿಯಲ್ಲಿದೆ. ಇಂದು ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್ ಕುಂಡೇಲುಕಾಡಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ, ಕಟ್ಟಡದ ಭದ್ರತೆ ಮತ್ತು ಕಾಗದ ಪತ್ರಗಳನ್ನು ಪರಿಶೀಲಿಸಿ ನಂತರ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಉಡುಪಿ- ಮಣಿಪಾಲದ ಮಾರ್ಗವಾಗಿ ಸಿಗುವ (ಹಿಂದಿನ ಕುಂಡೇಲುಕಾಡಿನ ಗುಡ್ಡ) ಸಿಂಡಿಕೇಟ್‌ ಸರ್ಕಲ್‌ನಲ್ಲಿ 2004-2005ರಲ್ಲಿ ನಿರ್ಮಾಣಗೊಂಡ ಪ್ರೀಮಿಯರ್‌ ಎನ್‌ಕ್ಲೇವ್‌ ಬಹುಮಹಡಿ ಕಟ್ಟಡದ ರಕ್ಷಣಾ ತಡೆಗೋಡೆ ಎರಡು ಮೂರು ದಿನಗಳಿಂದ ಸುರಿದ ಭಾರೀ ಮಳೆಯಿಂದಾಗಿ ಕುಸಿದಿದೆ.

ಈಗಾಗಲೇ ಸುರಕ್ಷಾ ದೃಷ್ಟಿಯಿಂದ ಪ್ರೀಮಿಯರ್‌ ಎನ್‌ಕ್ಲೇವ್ ಕಟ್ಟಡದ ನಿವಾಸಿಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ.

- Advertisement -
spot_img

Latest News

error: Content is protected !!