Thursday, June 4, 2026
Homeಕರಾವಳಿಉಡುಪಿಉಡುಪಿ: ಯುವಕರ ಜೊತೆ ಕ್ರಿಕೆಟ್ ಆಡಿದ ಜಿಲ್ಲಾಧಿಕಾರಿ ಜಿ.ಜಗದೀಶ್

ಉಡುಪಿ: ಯುವಕರ ಜೊತೆ ಕ್ರಿಕೆಟ್ ಆಡಿದ ಜಿಲ್ಲಾಧಿಕಾರಿ ಜಿ.ಜಗದೀಶ್

- Advertisement -
- Advertisement -

ಉಡುಪಿ: ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಜನಸ್ನೇಹಿ ಡಿ.ಸಿ. ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಜಿ. ಜಗದೀಶ್ ಸ್ಥಳೀಯ ಯುವಕರ ಜೊತೆ ಕ್ರಿಕೆಟ್ ಆಡುವ ಮೂಲಕ ಯುವಕರನ್ನು ಖುಷಿ ಪಡಿಸಿದ್ದಾರೆ.

ಜಿಲ್ಲಾಸ್ಪತ್ರೆಯ ವೀಕ್ಷಣೆ ಸಂದರ್ಭ ಕೆಲ ಯುವಕರು ಕ್ರಿಕೆಟ್ ಆಡುತ್ತಿದ್ದರು. ಅಲ್ಲಿಗೆ ತೆರಳಿದ ಜಿಲ್ಲಾಧಿಕಾರಿ ಜಗದೀಶ್ ಯುವಕರ ಜೊತೆ ಕ್ರಿಕೆಟ್ ಆಡಿದ್ದಾರೆ. ಬ್ಯಾಟಿಂಗ್ ಮಾಡಿ ಬೌಂಡರಿ ಬಾರಿಸುವ ಮೂಲಕ ತಮ್ಮ ಯೌವನದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಜಿಲ್ಲಾಧಿಕಾರಿಗಳ ದಿಢೀರ್ ಭೇಟಿ ಮತ್ತು ಕ್ರಿಕೆಟ್ ಆಟ ಸ್ಥಳೀಯ ಯುವಕರಲ್ಲಿ ಉತ್ಸಾಹ ಹೆಚ್ಚಿಸಿದೆ.

ಬಲಗೈ ಬ್ಯಾಟ್ಸ್ ಮನ್ ಆಗಿ ಚೆಂಡನ್ನು ನಿರೀಕ್ಷಿಸುತ್ತಿದ್ದ ಉಡುಪಿ ಜಿಲ್ಲಾಧಿಕಾರಿಯವರು ಮೊದಲ ಎಸೆತವನ್ನೇ ಜೋರಾಗಿ ಹೊಡೆದರು. ನಂತರದ ಎಸೆತವನ್ನು ಕೂಡ ಆರಂಭಿಕ ಆಟಗಾರನ ಶೈಲಿಯಲ್ಲಿ ಆಡಿ ಅಲ್ಲಿದ್ದವರನ್ನು ರಂಜಿಸಿದರು. ದೀಗ ಈ ಚಿತ್ರವು ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

- Advertisement -

Latest News

error: Content is protected !!