Thursday, April 25, 2024
Homeತಾಜಾ ಸುದ್ದಿಖುಷ್ಬೂ ನಂತರ ಕಾಂಗ್ರೆಸ್ ತೊರೆದ ಅಪ್ಸರಾ ರೆಡ್ಡಿ: ಮುಂದಿನ ಹೆಜ್ಜೆ ಯಾವ ಪಕ್ಷದತ್ತ ?

ಖುಷ್ಬೂ ನಂತರ ಕಾಂಗ್ರೆಸ್ ತೊರೆದ ಅಪ್ಸರಾ ರೆಡ್ಡಿ: ಮುಂದಿನ ಹೆಜ್ಜೆ ಯಾವ ಪಕ್ಷದತ್ತ ?

spot_img
- Advertisement -
- Advertisement -

ಚೆನ್ನೈ: ನಟಿ ಹಾಗೂ ರಾಜಕಾರಣಿ ಖುಷ್ಬೂ ಸುಂದರ್ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಕೆಲವೇ ವಾರಗಳಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿದ್ದ ಮೊದಲ ತೃತೀಯಲಿಂಗಿ ಅಪ್ಸರಾ ರೆಡ್ಡಿ ಅವರು ಸಹ ಕಾಂಗ್ರೆಸ್ ತೊರೆದಿದ್ದು, ಮತ್ತೆ ಎಐಎಡಿಎಂಕೆ ಸೇರಲು ನಿರ್ಧರಿಸಿದ್ದಾರೆ.

ಅಪ್ಸರಾ ರೆಡ್ಡಿ ಅವರು ಮೂರು ವರ್ಷಗಳ ನಂತರ ಮತ್ತೆ ಎಐಎಡಿಎಂಕೆಗೆ ಬರುತ್ತಿದ್ದು, ಮುಖ್ಯಮಂತ್ರಿ ಇಕೆ ಪಳನಿಸ್ವಾಮಿ, ಉಪ ಮುಖ್ಯಮಂತ್ರಿ ಓ ಪನ್ನೀರ್ ಸೇಲ್ವಂ ಅವರ ನೇತೃತ್ವದಲ್ಲಿ ಪಕ್ಷ ಸೇರಲಿದ್ದಾರೆ.

ಈ ಕುರಿತು ಮಾತನಾಡಿದ ರೆಡ್ಡಿ, ಮುಖ್ಯಮಂತ್ರಿ ಪಳನಿಸ್ವಾಮಿ ಅವರು ಅಮ್ಮನ ನಿಯಮವನ್ನು ಪಾಲಿಸುತ್ತಿದ್ದಾರೆ ಎಂದು ನಾನು ಭಾವಿಸುತ್ತೇನೆ. ಎಐಎಡಿಎಂಕೆಯಲ್ಲಿ ತೃತೀಯಲಿಂಗಿ ಮಹಿಳೆಗೆ ಸರಿಯಾದ ಮಾನ್ಯತೆ ಸಿಗುತ್ತದೆ ಎಂದು ನಾನು ಬಲವಾಗಿ ನಂಬುತ್ತೇನೆ. ಏಕೆಂದರೆ ನಾನು ಅದನ್ನು ಅಮ್ಮನ ಕಾಲದಲ್ಲಿ ಅನುಭವಿಸಿದ್ದೇನೆ ಎಂದು ಹೇಳಿದ್ದಾರೆ.

ಎಐಎಡಿಎಂಕೆ ಯಲ್ಲಿ ಯಾವುದೇ ಸ್ಥಾನವನ್ನು ನಿರೀಕ್ಷಿಸುತ್ತಿಲ್ಲ. ಆದರೆ ಅವರು ನೀಡುವ ಯಾವುದೇ ಹುದ್ದೆಯನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ ಎಂದು ರೆಡ್ಡಿ ತಿಳಿಸಿದ್ದಾರೆ.

ಮಾಜಿ ಪತ್ರಕರ್ತೆ, ಮಂಗಳಮುಖಿ ಅಪ್ಸರಾ ರೆಡ್ಡಿ ಅವರನ್ನು ಈ ಹಿಂದೆ ಮಹಿಳಾ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿತ್ತು. ಭಾರತವನ್ನು ಕಟ್ಟಿದ್ದು ಕಾಂಗ್ರೆಸ್‌. ಉತ್ತಮ ಯೋಜನೆಗಳ ಮೂಲಕ ರಾಷ್ಟ್ರದ ನಾಗರಿಕ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದೆ. ಮಹಿಳೆಯರಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದೆ ಎಂದು ಅಪ್ಸರಾ ರೆಡ್ಡಿ ಕಾಂಗ್ರೆಸ್‌ ಪಕ್ಷವನ್ನು ಕೊಂಡಾಡಿದ್ದರು.

ಇದಕ್ಕೂ ಮೊದಲು ಅವರು ಸ್ವಲ್ಪ ದಿನಗಳ ಕಾಲ ಬಿಜೆಪಿಯಲ್ಲೂ ಇದ್ದರು. ಮಹಿಳೆಯರ ವಿರುದ್ಧದ ಬಿಜೆಪಿ ಧೋರಣೆಯಿಂದ ಬೆಸರಿಸಿಕೊಂಡು ಇತ್ತೀಚೆಗೆ ಪಕ್ಷ ತೊರೆದಿದ್ದರು.

- Advertisement -
spot_img

Latest News

error: Content is protected !!