Wednesday, June 26, 2024
Homeಕರಾವಳಿಉಡುಪಿಕಾರ್ಕಳ : ಎ.ಟಿ.ಎಂ ಕಾರ್ಡ್ ಹ್ಯಾಕಿಂಗ್‌ ಪ್ರಕರಣ:25 ಸಾವಿರ ರೂ. ಪರಿಹಾರ ನೀಡುವಂತೆ ಬ್ಯಾಂಕ್ ಗೆ...

ಕಾರ್ಕಳ : ಎ.ಟಿ.ಎಂ ಕಾರ್ಡ್ ಹ್ಯಾಕಿಂಗ್‌ ಪ್ರಕರಣ:25 ಸಾವಿರ ರೂ. ಪರಿಹಾರ ನೀಡುವಂತೆ ಬ್ಯಾಂಕ್ ಗೆ ಉಡುಪಿ ಜಿಲ್ಲಾ ಗ್ರಾಹಕ ನ್ಯಾಯಾಲಯ ಆದೇಶ!

spot_img
- Advertisement -
- Advertisement -

ಕಾರ್ಕಳ : ಕಾರ್ಕಳ : ಎ.ಟಿ.ಎಂ ಕಾರ್ಡ್ ಹ್ಯಾಕಿಂಗ್‌ ಪ್ರಕರಣಕ್ಕೆ ಸಂಬಂಧಿಸಿದಂತೆ 25,000 ರೂ. ಗಳನ್ನು ಗ್ರಾಹಕನಿಗೆ ಒಂದು ತಿಂಗಳೊಳಗೆ ಪಾವತಿಸುವಂತೆ ಉಡುಪಿಯ ಜಿಲ್ಲಾ ಗ್ರಾಹಕ ನ್ಯಾಯಾಲಯವು ಬ್ಯಾಂಕ್ ಆಫ್ ಬರೋಡ ಕಾರ್ಕಳ ಶಾಖೆಗೆ ಆದೇಶಿಸಿದೆ

ಎ.ಟಿ.ಎಂ ಕಾರ್ಡ್ ಹ್ಯಾಕಿಂಗ್‌ಗೆ ಸಂಬಂಧಿಸಿದಂತೆ ಬ್ಯಾಂಕ್ ಆಫ್ ಬರೋಡ ಕಾರ್ಕಳ ಶಾಖೆಯ ಸೇವಾ ನ್ಯೂನತೆ ಸಾಬೀತಾಗಿರುವ ಹಿನ್ನೆಲೆಯಲ್ಲಿ ದೂರುದಾರರಾದ ಕಾರ್ಕಳ ತಾಲೂಕು ಬಜಗೋಳಿ ಮಾಳದ ನಿವೃತ್ತ ಬ್ಯಾಂಕ್ ನೌಕರ ಕೆ.ಸಿ.ಲಿಂಗಪ್ಪನವರ ಉಳಿತಾಯ ಖಾತೆಯಿಂದ ಅನಧಿಕೃತವಾಗಿ ಕಡಿತಗೊಂಡ 10,023.60 ರೂ.ವನ್ನು ಶೇ.10ರ ಬಡ್ಡಿ ಹಾಗೂ ಪರಿಹಾರ, ದಾವಾ ಖರ್ಚು ಮೊತ್ತವಾದ ರೂ.25,000ವನ್ನು ಒಂದು ತಿಂಗಳೊಳಗೆ ಪಾವತಿಸುವಂತೆ ಉಡುಪಿಯ ಜಿಲ್ಲಾ ಗ್ರಾಹಕ ನ್ಯಾಯಾಲಯ ಸಂಬಂಧಿಸಿದ ಬ್ಯಾಂಕಿಗೆ ಆದೇಶಿಸಿದೆ.

ಕಾರ್ಕಳದ ಬ್ಯಾಂಕ್ ಆಫ್ ಬರೋಡ ಶಾಖೆಯಲ್ಲಿ ಎಸ್‌ಬಿ ಅಕೌಂಟ್ ಹೊಂದಿದ್ದ ಹಿರಿಯ ನಾಗರಿಕರಾದ ಲಿಂಗಪ್ಪನವರು, ಕೊಲ್ಕತ್ತ, ಸಿಲಿಗುರಿ ಹಾಗೂ ಗ್ಯಾಂಗ್‌ ಟಕ್ ಪ್ರವಾಸದಲ್ಲಿದ್ದಾಗ 2019ರ ಸೆ.29ರಂದು ತನ್ನ ಮೊಬೈಲ್‌ಗೆ ಎಸ್‌ಎಂಎಸ್ ಒಂದು ಬಂದಿತ್ತು.ಅದರಲ್ಲಿ ತನ್ನ ಕಾರ್ಕಳ ಶಾಖೆಯಿಂದ 10,023.60ರೂ.ಯನ್ನು ಎಟಿಎಂ ಕಾರ್ಡ್ ಮೂಲಕ ತೆಗೆದಿರುವ ಸಂದೇಶ ಬಂದಿತ್ತು.

ಅ.15ರಂದು ಕಾರ್ಕಳಕ್ಕೆ ಬಂದು ಶಾಖೆಯಲ್ಲಿ ಲಿಖಿತ ದೂರು ಸಲ್ಲಿಸಿದ್ದಾಗಿ ಲಿಂಗಪ್ಪ ಅವರು ಗ್ರಾಹಕ ನ್ಯಾಯಾಲಯದ ಮುಂದೆ ವಾದಿಸಿದ್ದರು.ಆದರೆ ಬ್ಯಾಂಕ್ ಈ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ ಹಾಗೂ ತನ್ನ ಹಣವನ್ನು ಮರಳಿಸಲಿಲ್ಲ ಎಂದು ಅವರು ದೂರಿದ್ದರು. ಈ ಬಗ್ಗೆ ಎರಡೂ ಕಡೆಗಳ ವಾದ ಆಲಿಸಿದ ಶೋಭಾ ಸಿ.ವಿ. ಅಧ್ಯಕ್ಷತೆ ಹಾಗೂ ಸುಜಾತ ಬಿ.ಕೊರಳ್ಳಿ ಮತ್ತು ಶಾರದಮ್ಮ ಎಚ್.ಜಿ.ಇವರನ್ನೊಳಗೊಂಡ ಜಿಲ್ಲಾ ಗ್ರಾಹಕ ನ್ಯಾಯಾಲಯ ದೂರುದಾರರಿಗೆ ಪರಿಹಾರ ನೀಡುವಂತೆ ಆದೇಶಿಸಿತು.

ಬ್ಯಾಂಕ್ ಆಫ್ ಬರೋಡ, ದೂರುದಾರರಿಗೆ 2019ರ ಸೆ.29ರಿಂದ 2021ರ ಮಾ.28ರವರೆಗೆ ಶೇ.10ರ ಬಡ್ಡಿಯೊಂದಿಗೆ ಅಸಲು, ಪರಿಹಾರವಾಗಿ 15,000ರೂ. ಹಾಗೂ ದಾವೆಯ ಖರ್ಚು ವೆಚ್ಚಗಳಿಗೆ 10,000 ರೂ.ಗಳನ್ನು ಒಂದು ತಿಂಗಳೊಳಗೆ ಪಾವತಿಸುವಂತೆ ಜು.31ರಂದು ನೀಡಿದ ಆದೇಶದಲ್ಲಿ ತಿಳಿಸಿದೆ. ದೂರುದಾರರ ಪರವಾಗಿ ನ್ಯಾಯವಾದಿಗಳಾದ ಕಾರ್ಕಳದ ವಿವೇಕಾನಂದ ಮಲ್ಯ ಮತ್ತು ಕೋಟ ಅಶ್ವಿನಿ ಹೆಗ್ಡೆ ವಾದಿಸಿದ್ದರು.

- Advertisement -
spot_img

Latest News

error: Content is protected !!