Saturday, May 18, 2024
Homeಕರಾವಳಿಕಾರ್ಕಳದಲ್ಲಿ ಒಟ್ಟಿಗೆ ಎಸ್ಸೆಸೆಲ್ಸಿ ಪರೀಕ್ಷೆ ಬರೆದ ತಾಯಿ ಮಗ: ಇಬ್ಬರೂ ಉತ್ತಮ ಅಂಕಗಳೊಂದಿಗೆ ಉತ್ತೀರ್ಣ

ಕಾರ್ಕಳದಲ್ಲಿ ಒಟ್ಟಿಗೆ ಎಸ್ಸೆಸೆಲ್ಸಿ ಪರೀಕ್ಷೆ ಬರೆದ ತಾಯಿ ಮಗ: ಇಬ್ಬರೂ ಉತ್ತಮ ಅಂಕಗಳೊಂದಿಗೆ ಉತ್ತೀರ್ಣ

spot_img
- Advertisement -
- Advertisement -

ಕಾರ್ಕಳ : ಎಸ್ಸೆಸೆಲ್ಸಿ ಪರೀಕ್ಷೆ ಒಟ್ಟಿಗೆ  ಬರೆದು ತಾಯಿ ಮಗ ಇಬ್ಬರೂ ಉತ್ತಮ ಅಂಕಗಳೊಂದಿಗೆ ಪಾಸಾಗಿರುವ ವಿಶೇಷ ಘಟನೆ ಕಾರ್ಕಳದಲ್ಲಿ ನಡೆದಿದೆ.  ಕಾರ್ಕಳ ತಾಲೂಕು ತೆಳ್ಳಾರು ಮಿತ್ತಬೆಟ್ಟುವಿನ ತಾಯಿ-ಮಗ ಇಬ್ಬರೂ ಉತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿದ್ದಾರೆ.

ದುರ್ಗಾ ತೆಳ್ಳಾರಿನ ಬಿ. ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರೌಢಶಾಲೆ ಇಲ್ಲಿನ ವಿದ್ಯಾರ್ಥಿ ವಿಕ್ರಂ 559 ಅಂಕ ಪಡೆಯುವುದರೊಂದಿಗೆ ಡಿಸ್ಟಿಂಕ್ಷನ್‌ ನಲ್ಲಿ ತೇರ್ಗಡೆಯಾಗಿದ್ದರೆ ತಾಯಿ ಲತಾ ಅವರಿಗೆ 458 ಅಂಕ ದೊರೆತಿದೆ. ಸಂಸ್ಥೆಯೊಂದರಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಲತಾ ಅವರ ಶಿಕ್ಷಣ ಮೊಟಕುಗೊಂಡಿದ್ದ ಕಾರಣ ನೇರವಾಗಿ ಎಸ್ಸೆಸೆಲ್ಸಿ ಪರೀಕ್ಷೆ ಬರೆದಿದ್ದರು.

ಮಗನ ಆನ್ ಲೈನ್ ಕ್ಲಾಸ್ ನಿಂದ ಅನುಕೂಲ :

ಕೋವಿಡ್‌ ಕಾರಣದಿಂದ ಎಸ್ಸೆಸೆಲ್ಸಿ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಕ್ಲಾಸ್‌ ನೀಡಲಾಗುತ್ತಿತ್ತು. ವಿಕ್ರಂಗೆ ಶಿಕ್ಷಕರು ಆನ್‌ ಲೈನ್‌ ಕ್ಲಾಸ್‌ ನೀಡುತ್ತಿದ್ದ ಸಂದರ್ಭ ತಾಯಿ ಲತಾ ಅವರು ಆನ್‌ಲೈನ್‌ ತರಗತಿಗೆ ಹಾಜರಾಗುತ್ತಿದ್ದರು. ಮಗನಲ್ಲಿ ಕೇಳಿ ಕಲಿಯುತ್ತಿದ್ದೆ.

ಎಸ್ಸೆಸೆಲ್ಸಿ ಪರೀಕ್ಷೆ ಬರೆಯಲು ಮಗನ ಆನ್‌ಲೈನ್‌ ಕ್ಲಾಸ್‌ ನನಗೆ ಸಹಕಾರಿಯಾಗಿದೆ. ಅರ್ಥವಾಗದ ವಿಷಯ ಕುರಿತು ಮಗನೊಂದಿಗೆ ಚರ್ಚೆ ಮಾಡುತ್ತಿದ್ದೆ. ನನ್ನ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದ ಗಂಡ ಹಾಗೂ ತೆಳ್ಳಾರು ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಸ್ಮಿತಾ ಹಾಗೂ ಶಿಕ್ಷಕ ವೃಂದದವರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ ಎಂದು ಲತಾ ಹೇಳಿದ್ದಾರೆ. ತಾಯಿ-ಮಗ ಎಸ್ಸೆಸೆಲ್ಸಿ ಪರೀಕ್ಷೆಗಾಗಿ ಸಾಕಷ್ಟು ತಯಾರಿ ನಡೆಸಿದ್ದರು.

- Advertisement -
spot_img

Latest News

error: Content is protected !!