Thursday, June 4, 2026
Homeಕರಾವಳಿಉಡುಪಿಉಡುಪಿ; ತಾವೇ ಸ್ವತ: ಕಸದ ವಾಹನ ಚಲಾಯಿಸಿ‌‌ ಮನೆ ಮನೆಯಿಂದ ಕಸ ಸಂಗ್ರಹಿಸಿದ ಜಿಪಂ ಸಿಇಓ

ಉಡುಪಿ; ತಾವೇ ಸ್ವತ: ಕಸದ ವಾಹನ ಚಲಾಯಿಸಿ‌‌ ಮನೆ ಮನೆಯಿಂದ ಕಸ ಸಂಗ್ರಹಿಸಿದ ಜಿಪಂ ಸಿಇಓ

- Advertisement -
- Advertisement -

ಉಡುಪಿ; ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ತಾವೇ ಕಸದ ವಾಹನ ಚಲಾಯಿಸಿ‌‌ ಮನೆ ಮನೆಯಿಂದ ಕಸ ಸಂಗ್ರಹಿಸಿ‌ ಗಮನ‌ ಸೆಳೆದಿದ್ದಾರೆ.

ಬಡಗಬೆಟ್ಟು ತ್ಯಾಜ್ಯ ಸಂಗ್ರಹಣಾ ಕೇಂದ್ರಕ್ಕೆ ಅನಿರೀಕ್ಷಿತ ಭೇಟಿ‌ ನೀಡಿದ ಉಡುಪಿ ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರಸನ್ನ ಎಚ್.,  ಸ್ವತಃ ತಾಜ್ಯ‌ ನಿರ್ವಹಣೆ ವಾಹನ‌ ಚಲಾಯಿಸಿ ಜನರಿಂದ ಕಸ ಸಂಗ್ರಹಿಸಿದರು.

ಇಂದು ಬೆಳಗ್ಗೆ ಉಡುಪಿ ಜಿಲ್ಲಾ‌ ಪಂಚಾಯತ್ ನ‌ ಮುಖ್ಯ‌ಕಾರ್ಯನಿರ್ವಹಣಾಧಿಕಾರಿ ಇವರು ಬಡಗಬೆಟ್ಟು ಗ್ರಾಮ‌ ಪಂಚಾಯತ್ ನ ತ್ಯಾಜ್ಯ‌ ನಿರ್ವಹಣಾ ವಾಹನವನ್ನು ಚಾಲನೆ‌ ಮಾಡಿ ಮನೆ ಮನೆಯಿಂದ ತ್ಯಾಜ್ಯ‌ ಸಂಗ್ರಹಣೆಯಲ್ಲಿ ಭಾಗಿಯಾಗಿ ಎಲ್ಲರ ಅಚ್ಚರಿಗೆ ಕಾರಣರಾದರು. IAS ಅಧಿಕಾರಿಯೊಬ್ಬರ ಈ ನಡೆ ಜಿಲ್ಲೆಯ ತ್ಯಾಜ್ಯ ನಿರ್ವಹಣಾ ಕಾರ್ಯಕರ್ತರಿಗೆ ಸ್ಫೂರ್ತಿ ತಂದಿದೆ.

ಈ ಸಂದರ್ಭದಲ್ಲಿ ಗ್ರಾಮ‌ ಪಂಚಾಯತ್ ಸದಸ್ಯರು, ಅಭಿವೃದ್ದಿ ಅಧಿಕಾರಿಗಳು, ಜಿಪಂ‌ ಮುಖ್ಯ ಯೋಜನಾಧಿಕಾರಿಗಳು, ಇತರ‌ ಪ್ರಮುಖರು‌ ಉಪಸ್ಥಿತರಿದ್ದರು.

- Advertisement -

Latest News

error: Content is protected !!