Tuesday, May 21, 2024
Homeಕರಾವಳಿಉಡುಪಿಅಮೆರಿಕಾದಲ್ಲಿದ್ದ ಮೋದಿಯವರಿಗೆ ಆತಿಥ್ಯ ನೀಡಿದ ಉಡುಪಿ ಮೂಲದ ಆನಂದ ಪೂಜಾರಿ

ಅಮೆರಿಕಾದಲ್ಲಿದ್ದ ಮೋದಿಯವರಿಗೆ ಆತಿಥ್ಯ ನೀಡಿದ ಉಡುಪಿ ಮೂಲದ ಆನಂದ ಪೂಜಾರಿ

spot_img
- Advertisement -
- Advertisement -

ಉಡುಪಿ: ಉಡುಪಿ ಜಿಲ್ಲೆಯ ಕುಂದಾಪುರದ ಆಲೂರು ಮೂಲದ ಅನಿವಾಸಿ ಭಾರತೀಯ ಹೋಟೆಲ್ ಉದ್ಯಮಿ ಆನಂದ ಪೂಜಾರಿಯವರು ಪ್ರಧಾನಿ ನರೇಂದ್ರ ಮೋದಿ ಅವರ ಮೂರು ದಿನಗಳ ಅಮೆರಿಕ ಪ್ರವಾಸದಲ್ಲಿ ಊಟೋಪಚಾರ ಸಹಿತ ಆತಿಥ್ಯದ ನೇತೃತ್ವ ವಹಿಸಿದ್ದರು.

ಆನಂದ ಪೂಜಾರಿ ಮತ್ತು ಪತ್ನಿ ಸುಮಿತಾ ಅಮೆರಿಕದ ವಾಷಿಂಗ್ಟನ್ ಡಿಸಿಯಲ್ಲಿ ಕಳೆದ ಮೂರು ದಶಕಗಳಿಂದ ನೆಲೆಸಿದ್ದು, ಪ್ರಧಾನಿ ಮೋದಿ ಈ ಹಿಂದೆ ಅಮೇರಿಕಾಕ್ಕೆ ಹೋಗಿದ್ದಾಗಲೂ ಇದೆ ದಂಪತಿ ಆತಿಥ್ಯ ನೀಡಿದ್ದಾರೆ.

ಅಮೆರಿಕಾದಲ್ಲಿ ವುಡ್ ಲ್ಯಾಂಡ್ಸ್ ಹೊಟೇಲ್ ನಡೆಸುತ್ತಿದ್ದು, ಈ ಬಾರಿ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸುವ ಅವಕಾಶವನ್ನು ಈ ದಂಪತಿ ಪಡೆದಿದ್ದಾರೆ.

ಪ್ರಧಾನಿ ಮೋದಿಯವರು ಅಮೆರಿಕದಲ್ಲಿದ್ದರೂ ಭಾರತೀಯ ಶೈಲಿಯ ಊಟಕ್ಕೆ ಆದ್ಯತೆ ನೀಡುತ್ತಿದ್ದರು. ಅಲ್ಲದೆ ಮೋದಿಯವರು ದಕ್ಷಿಣ ಭಾರತೀಯ ಖಾದ್ಯಗಳಿಗೆ ಮಾರುಹೋಗಿದ್ದಾರೆ.ಬೆಳಗ್ಗೆ ಇಡ್ಲಿ ವಡೆ ಸಾಂಬಾರ್, ಉಪ್ಪಿಟ್ಟು, ಊಟದಲ್ಲಿ ಎರಡು ಅಗೆಯ ಸಿಹಿ ಇರಲೇಬೇಕು. ಇದಲ್ಲದೆ ಅಮೆರಿಕ್ಕಾದ ಪ್ಯೂರ್ ವೇಗ್ ಖಾದ್ಯಗಳನ್ನು ಮೋದಿಯವರು ಇಷ್ಟ ಪಡುತ್ತಾರೆ. ಅಲ್ಲದೆ ದಿನಕ್ಕೆ ನಾಲ್ಕು ಬಾರಿ ಮಸಾಲಾ ಚಹಾ ಸೇವಿಸುತ್ತಾರೆ ಎಂದು ಆನಂದ ಪೂಜಾರಿಯಾರು ಹೇಳುತ್ತಾರೆ. ಮೂಲತಃ ಬೈಂದೂರು ತಾಲೂಕಿನ ಆಲೂರು ಗ್ರಾಮದ ಕಲ್ಲಂಗಡಿ ಮನೆಯ ನಿವಾಸಿ ಬಡಿಯ ಪೂಜಾರಿ ಹಾಗೂ ಗಿರಿಜಾ ದಂಪತಿಯ ಪುತ್ರರಾದ ಇವರು, ಅಮೆರಿಕದಲ್ಲಿ ನೆಲೆಸಿದ್ದರೂ ಊರಿಗೆ ಆಗಾಗ ಆಗಮಿಸುತ್ತಾರೆ.

- Advertisement -
spot_img

Latest News

error: Content is protected !!