Sunday, June 7, 2026
Homeಕರಾವಳಿಉಡುಪಿಉಡುಪಿ; ಮನೆಯೊಳಗೆ ನುಗ್ಗಿ ವ್ಯಕ್ತಿಯ ಮೇಲೆ ದಾಳಿ ಮಾಡಿದ ಚಿರತೆ

ಉಡುಪಿ; ಮನೆಯೊಳಗೆ ನುಗ್ಗಿ ವ್ಯಕ್ತಿಯ ಮೇಲೆ ದಾಳಿ ಮಾಡಿದ ಚಿರತೆ

- Advertisement -
- Advertisement -

ಉಡುಪಿ; ಮನೆಯೊಳಗೆ ನುಗ್ಗಿ ಚಿರತೆಯೊಂದು ದಾಳಿ ಮಾಡಿದ ಘಟನೆ ಕಳೆದ ರಾತ್ರಿ ಕೊಲ್ಲೂರು ಸಮೀಪ ನಡೆದಿದೆ.ಕೊಲ್ಲೂರು ಸಮೀಪದ ನಾಗೋಡಿ ಎಂಬಲ್ಲಿ ಈ ಘಟನೆ ನಡೆದಿದ್ದು ಗಣೇಶ್(48) ಎಂಬವರ ಮೇಲೆ ಚಿರತೆ ದಾಳಿ ಮಾಡಿದೆ. ಅವರು ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಾಗೋಡಿ ಚೆಕ್ ಪೋಸ್ಟ್ ಸಮೀಪದ ಮರಾಠಿ ಗ್ರಾಮದ ಕಂಚಿಕೇರಿ ಎಂಬಲ್ಲಿ ಮನೆಯಲ್ಲಿದ್ದ ವೇಳೆ ಚಿರತೆ ದಾಳಿ ನಡೆಸಿದೆ. ಮನೆ ಎದುರಿಗಿದ್ದ ನಾಯಿಯನ್ನು ಸೆರೆಹಿಡಿಯಲು ಬಂದಾಗ ನಾಯಿ ಗಾಬರಿಗೊಂಡು ಕಿಟಕಿ ಮೂಲಕ ಮನೆಯೊಳಕ್ಕೆ ಪ್ರವೇಶಿಸಿದೆ. ನಾಯಿಯನ್ನು ಬೆನ್ನತ್ತಿ ಚಿರತೆಯೂ ಮನೆಯೊಳಗೆ ನುಗ್ಗಿದ್ದು, ಈ ವೇಳೆ ಗಣೇಶ್ ಅವರ ಮೇಲೆ ದಾಳಿ ನಡೆಸಿದೆ. ಇದರಿಂದ ಗಣೇಶ್ ಅವರ ಕೈಗೆ ತೀವ್ರ ಗಾಯಗಳಾಗಿವೆ. ಕೂಡಲೇ ಅವರನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

- Advertisement -

Latest News

error: Content is protected !!