Thursday, June 4, 2026
Homeಕರಾವಳಿಸುಳ್ಯ: ಮಸೂದ್ ನಿವಾಸಕ್ಕೆ ಶಾಸಕ ಯು ಟಿ ಖಾದರ್ ಭೇಟಿ: ಪ್ರವೀಣ್ ನೆಟ್ಟಾರು ಕುಟುಂಬಸ್ಥರೊಂದಿಗೆ ದೂರವಾಣಿ...

ಸುಳ್ಯ: ಮಸೂದ್ ನಿವಾಸಕ್ಕೆ ಶಾಸಕ ಯು ಟಿ ಖಾದರ್ ಭೇಟಿ: ಪ್ರವೀಣ್ ನೆಟ್ಟಾರು ಕುಟುಂಬಸ್ಥರೊಂದಿಗೆ ದೂರವಾಣಿ ಮೂಲಕ ಮಾತುಕತೆ

- Advertisement -
- Advertisement -

ಸುಳ್ಯ; ಇತ್ತೀಚೆಗೆ ಕೊಲೆಗೀಡಾದ ಮಸೂದ್ ನಿವಾಸಕ್ಕೆ ಇಂದು ಶಾಸಕ ಯು.ಟಿ.ಖಾದರ್ ಅವರು ಭೇಟಿ ಸಾಂತ್ವನ ಹೇಳಿದ್ದಾರೆ.

ಇನ್ನು ಪ್ರವೀಣ್ ನೆಟ್ಟಾರುರವರ ಮನೆಗೂ ಕೂಡಾ ವಿಪಕ್ಷ ಉಪ ನಾಯಕ ಯು.ಟಿ.ಖಾದರ್ ಭೇಟಿ ನೀಡಬೇಕಿತ್ತಾದರೂ ಅವರ ಪತ್ನಿ ಮತ್ತು ಹೆತ್ತವರು ವಿಶ್ರಾಂತಿಯಲ್ಲಿರುವುದರಿಂದ ನೆಟ್ಟಾರುರವರ ಚಿಕ್ಕಪ್ಪ ವಿಶ್ವನಾಥ ಅವರಲ್ಲಿ ದೂರವಾಣಿ ಮೂಲಕ ಸಂಪರ್ಕಿಸಿ ಸಾಂತ್ವನ ಹೇಳಿದ್ದಾರೆ.

ಕಳೆದ ಎರಡು ದಿನಗಳಿಂದ ಸತತ ನಾಯಕರು ಇತರರ ಭೇಟಿಯಿಂದಾಗಿ ಪ್ರವೀಣ ನೆಟ್ಟಾರುರವರ ಪತ್ನಿ ಹಾಗೂ ಹೆತ್ತವರು ವಿಶ್ರಾಂತಿಯಲ್ಲಿದ್ದು ತಾವು ಕರೆ ಮಾಡಿ ಸಾಂತ್ವನ ತಿಳಿಸಿದ್ದು ಮನೆಗೆ ಭೇಟಿ ನೀಡಿದ್ದಷ್ಟೆ ತೃಪ್ತಿಯಾಯಿತೆಂದು ಈ ಸಂದರ್ಭದಲ್ಲಿ ಪ್ರವೀಣ್ ರವರ ಚಿಕ್ಕಪ್ಪ ವಿಶ್ವನಾಥ ರವರು ಯು.ಟಿ.ಖಾದರ್ ರವರಿಗೆ ತಿಳಿಸಿದ್ದಾರೆ.

- Advertisement -

Latest News

error: Content is protected !!