Thursday, June 4, 2026
Homeಕರಾವಳಿಉಡುಪಿಉಡುಪಿ: ವರಂಗ ಕೆರೆ ಬಸದಿಯಲ್ಲಿ ತಪ್ಪಿದ ದುರಂತ; ಈಜಾಡಲಾಗದೇ ಮುಳುಗುತ್ತಿದ್ದ ಯುವಕರ ರಕ್ಷಣೆ

ಉಡುಪಿ: ವರಂಗ ಕೆರೆ ಬಸದಿಯಲ್ಲಿ ತಪ್ಪಿದ ದುರಂತ; ಈಜಾಡಲಾಗದೇ ಮುಳುಗುತ್ತಿದ್ದ ಯುವಕರ ರಕ್ಷಣೆ

- Advertisement -
- Advertisement -

ಉಡುಪಿ: ವಾರಾಂತ್ಯ ಕಳೆಯಲೆಂದು ಬಂದಿದ್ದ ಯುವಕರಿಬ್ಬರು ನೀರಿನಲ್ಲಿ ಮುಳುಗುವುದರಿಂದ ರಕ್ಷಿಸಲ್ಪಟ್ಟ ಘಟನೆ ವರಂಗ ಕೆರೆ ಬಸದಿಯಲ್ಲಿ ಸಂಭವಿಸಿದೆ.

ಹೆಬ್ರಿ ತಾಲೂಕಿನ ವರಂಗ ಕೆರೆ ಬಸದಿಯಲ್ಲಿ ಇಬ್ಬರು ಯುವಕರು ನೀರಿನಲ್ಲಿ ಈಜಿ ಕೆರೆಯ ಮಧ್ಯೆ ಇರುವ ಬಸದಿ ತಲುಪಲು ಮುಂದಾಗಿದ್ದರು‌.

ಆದರೆ ದಡ ಸೇರುವ ಮುನ್ನವೇ ಈಜಾಡಲಾಗದೇ ಮುಳುಗಲಾರಂಭಿಸಿದ್ದು, ರಕ್ಷಣೆಗಾಗಿ ಮೊರೆಯಿಟ್ಟಿದ್ದರು. ಕೂಡಲೇ ಸ್ಥಳೀಯ ಯುವಕರು ಲೈಫ್ ಜಾಕೆಟ್ ಬಳಸಿ ಮುಳುಗುತ್ತಿದ್ದವರನ್ನು ರಕ್ಷಣೆ ಮಾಡಿದ್ದಾರೆ.

ಹೆಬ್ರಿ ತಾಲೂಕಿನ ವರಂಗದಲ್ಲಿ ಕೆರೆಯ ಮಧ್ಯೆ ಜೈನ ಬಸದಿ ಇದ್ದು, ಪ್ರವಾಸಕ್ಕೆಂದು ಬಂದಿದ್ದ ಇಬ್ಬರು ಯುವಕರು ನೀರಿಗೆ ಇಳಿದಿದ್ದರು

- Advertisement -

Latest News

error: Content is protected !!