ಬೈಂದೂರು: ವಿದ್ಯಾರ್ಥಿಗಳಿಬ್ಬರು ದೇವಸ್ಥಾನದ ಕೆರೆಯಲ್ಲಿ ಈಜಾಡಲೆಂದು ಹೋಗಿ, ಈಜಾಡುವ ವೇಳೆಯಲ್ಲಿ ನೀರಿನಲ್ಲಿ ಮುಳುಗಿ ಮೃತ ಪಟ್ಟ ಘಟನೆ ನಡೆದಿದೆ.
ಮೃತ ಬಾಲಕರು ನಾಗೇಂದ್ರ (13) ಮತ್ತು ಮೊಹಮದ್ ಶಫಾನ್ (13) ಎಂದು ಗುರುತಿಸಲಾಗಿದೆ.
ನಾಗೇಂದ್ರ ಯೋಜನಾ ನಗರದ ನಿವಾಸಿ ಕೃಷ್ಣ ಅವರ ಪುತ್ರ ನಾಗಿದ್ದು, ಮೊಹಮದ್ ಶಫಾನ್ ರೈಲ್ವೆ ನಿಲ್ದಾಣದ ಬಳಿಯ ಶಾನು ಶಾಲಿಯಾನ್ ಅವರ ಪುತ್ರ. ಇವರಿಬ್ಬರು ಕೂಡ ಸರ್ಕಾರಿ ಪ್ರೌಢ ಶಾಲೆಯ 9ನೇ ತರಗತಿಯ ವಿದ್ಯಾರ್ಥಿಗಳಾಗಿದ್ದು, ಪರೀಕ್ಷೆ ಬರೆದು ಮನೆಗೆ ಬಂದು ಊಟ ಮುಗಿಸಿ ಈಜಾಡಲು ತೆರಳಿದ್ದರು ಎನ್ನಲಾಗಿದೆ.
ಸೈಕಲ್, ಬಟ್ಟೆ ಪಾದರಕ್ಷೆಗಳು ಕಂಡು ಬಂದ ಕಾರಣ ಇಬ್ಬರು ನೀರು ಪಾಲಾಗಿರುವುದು ತಿಳಿದು ಬಂದಿದೆ. ಈ ಘಟನೆಯು ಮಳೆಸುರಿಯುತ್ತಿದ್ದ ಕಾರಣವಾ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಶವಗಳನ್ನು ಕಾರ್ಯಾಚರಣೆ ನಡೆಸಿ ಬುಧವಾರ ನಸುಕಿನ ವೇಳೆ ಮೇಲಕ್ಕೆತ್ತಲಾಗಿದೆ.
ಕೆರೆಗೆ ಹಲವು ಮಂದಿ ಈಜಲೆಂದು ದಿನನಿತ್ಯವೂ ಬರುತ್ತಿದ್ದು, ಮಂಗಳವಾರದಂದು ಕಾರಣ ಯಾರೂ ಬಂದಿರಲಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ. ಸರಿಯಾಗಿ ಈಜು ಬರದಿರುವುದೇ ಬಾಲಕರಿಬ್ಬರ ಸಾವಿನ ಅವಘಡಕ್ಕೆ ಕಾರಣ ಎನ್ನಲಾಗಿದೆ. ಮೃತರಿಬ್ಬರ ಮನೆಯವರ ಆಕ್ರಂದನ ಮುಗಿಲು ಮುಟ್ಟಿದೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.