Friday, October 4, 2024
Homeಕರಾವಳಿಉಡುಪಿಅಕ್ರಮ ಪಂಪ್‌ಸೆಟ್‌ಗಳಿಗೆ ಕಡಿವಾಣ ಹಾಕಲು ಹೊಸ ಯೋಜನೆ; ಕೃಷಿ ಪಂಪ್‌ಸೆಟ್‌ಗೆ ಶೇ.99 ಆಧಾರ್‌ ಜೋಡಣೆ

ಅಕ್ರಮ ಪಂಪ್‌ಸೆಟ್‌ಗಳಿಗೆ ಕಡಿವಾಣ ಹಾಕಲು ಹೊಸ ಯೋಜನೆ; ಕೃಷಿ ಪಂಪ್‌ಸೆಟ್‌ಗೆ ಶೇ.99 ಆಧಾರ್‌ ಜೋಡಣೆ

spot_img
- Advertisement -
- Advertisement -

ಉಡುಪಿ: ಅಕ್ರಮ ಪಂಪ್‌ಸೆಟ್‌ಗಳಿಗೆ ಕಡಿವಾಣ ಹಾಕಲು ಪಂಪ್‌ಸೆಟ್‌ಗಳ ಆರ್‌.ಆರ್‌. ನಂಬರ್‌ಗಳಿಗೆ ಆಧಾರ್‌ ಲಿಂಕ್‌ ಯೋಜನೆಯನ್ನು ರೂಪಿಸಲಾಗಿದ್ದು, ಜಿಲ್ಲೆಯಲ್ಲಿ ಶೇ. 99ರಷ್ಟು ಆಧಾರ್‌ ಲಿಂಕ್‌ ಪೂರ್ಣಗೊಂಡಿದೆ ಎಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

ಕೃಷಿ ಪಂಪ್‌ಸೆಟ್‌ ಸಂಬಂಧಿಸಿ ರಾಜ್ಯ ಸರಕಾರ ಪ್ರತೀ ವರ್ಷ ವಿದ್ಯುತ್‌ ಕಂಪೆನಿಗಳಿಗೆ ನೀಡುತ್ತಿರುವ ವಿದ್ಯುತ್‌ ಸಹಾಯಧನ ಮತ್ತು ವಿದ್ಯುತ್‌ ಬಳಕೆ ಹೋಲಿಕೆ ಆಗುತ್ತಿದೇಯೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಮತ್ತು ಅಕ್ರಮ ಪಂಪ್‌ಸೆಟ್‌ಗಳಿಗೆ ಕಡಿವಾಣ ಹಾಕಲು ಈ ಯೋಜನೆಯನ್ನು ರೂಪಿಸಲಾಗಿತ್ತು.

ಈವರೆಗೂ ಜಿಲ್ಲೆಯಲ್ಲಿ ಒಟ್ಟು 86,716 ಪಂಪ್‌ಸೆಟ್‌ಗಳಲ್ಲಿ 85,864 ಪಂಪ್‌ಸೆಟ್‌ಗಳಿಗೆ ಆಧಾರ್‌ ಜೋಡಣೆಯಾಗಿದ್ದು, 852 ಪಂಪ್‌ಸೆಟ್‌ಗಳು ಇನ್ನೂ ಬಾಕಿ ಇದೆ. ಆಧಾರ್ ಜೋಡಣೆ ಮಾಡಲು ಸರಕಾರ ಸೆ. 23 ಕೊನೆಯ ದಿನವೆಂದು ತಿಳಿಸಿದ್ದು, ಜಿಲ್ಲೆಯಲ್ಲಿ ನೋಂದಣಿ ಪ್ರಕ್ರಿಯೆ ಕೊನೆಗೊಂಡಿಲ್ಲ ಪ್ರಸ್ತುತ ಆಧಾರ್‌ ಜೋಡಣೆ ಪ್ರಕ್ರಿಯೆ ಸ್ವೀಕರಿಸಲಾಗುತ್ತಿದೆ. ಉಡುಪಿ ಶೇ. 97, ಕುಂದಾಪುರ, ಕಾರ್ಕಳ ಶೇ. 99 ಪ್ರಗತಿಯಾಗಿದೆ ಎಂದು ಮೆಸ್ಕಾಂ ಅಧೀಕ್ಷಕ ಎಂಜಿನಿಯರ್‌ ದಿನೇಶ್‌ ಉಪಾಧ್ಯ ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!