Thursday, June 4, 2026
Homeಕರಾವಳಿಹಳೆ ಮನೆಯನ್ನು ಕೆಡವುತ್ತಿದ್ದಾಗ ಗೋಡೆ ಕುಸಿದು ಇಬ್ಬರು ಮೃತ್ಯು

ಹಳೆ ಮನೆಯನ್ನು ಕೆಡವುತ್ತಿದ್ದಾಗ ಗೋಡೆ ಕುಸಿದು ಇಬ್ಬರು ಮೃತ್ಯು

- Advertisement -
- Advertisement -

ಮಂಗಳೂರು: ನಗರದ ಜೈಲು‌ ರಸ್ತೆಯ ಬಳಿಯಲ್ಲಿರುವ ಹಳೆ ಮನೆಯೊಂದನ್ನು ಇಬ್ಬರು ಕೆಡವುತ್ತಿದ್ದ ಸಂದರ್ಭದಲ್ಲಿ ಗೋಡೆ ಕುಸಿದು ಇಬ್ಬರು ಮೃತಪಟ್ಟ ಘಟನೆ ಗುರುವಾರ ಬೆಳಗ್ಗೆ ನಡೆದಿದೆ.

ಮೃತ ದುರ್ದೈವಿಗಳು ಜೇಮ್ಸ್ ಸ್ಯಾಮುವೆಲ್ ಜತ್ತನ್ನ ಮತ್ತು ಅಡ್ವಿನ್ ಎಂದು ಗುರುತಿಸಲಾಗಿದೆ.

ಘಟನೆಯ ವಿವರ: ಈ ಘಟನೆಯು ಗುರುವಾರ ಬೆಳಗ್ಗೆ ನಡೆದಿದ್ದು, ಮನೆಯನ್ನು ಜೆಸಿಬಿ ಮೂಲಕ ಕೆಡವುತ್ತಿದ್ದಾಗ ಕಾಂಕ್ರೀಟ್ ಲಿಂಟೆಲ್ ಸಹಿತ ಗೋಡೆ ಮೈಮೇಲೆ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಬಹರೈನ್ ನಿಂದ ಜೇಮ್ಸ್ ಅವರು ಹಳೆ ಮನೆಯನ್ನು ಕೆಡವಿ ಹೊಸ ಮನೆ ನಿರ್ಮಿಸುವ ಉದ್ದೇಶದಿಂದ ಬಂದಿದ್ದರು. ಅಡ್ವಿನ್ ಪಕ್ಕದ ಮನೆಯವರಾಗಿದ್ದು ಸೋದರ ಸಂಬಂಧಿಯಾಗಿದ್ದರು ಎನ್ನಲಾಗಿದೆ.

- Advertisement -

Latest News

error: Content is protected !!