Saturday, May 4, 2024
HomeWorldಅಫ್ಘಾನಿಸ್ತಾನ: ವಿಮಾನದ ಚಕ್ರವನ್ನು ಹಿಡಿದು ನೇತಾಡುತ್ತಿದ್ದ ಇಬ್ಬರು ಪ್ರಯಾಣಿಕರು ಕೆಳಗೆ ಬಿದ್ದು ಸಾವು!!

ಅಫ್ಘಾನಿಸ್ತಾನ: ವಿಮಾನದ ಚಕ್ರವನ್ನು ಹಿಡಿದು ನೇತಾಡುತ್ತಿದ್ದ ಇಬ್ಬರು ಪ್ರಯಾಣಿಕರು ಕೆಳಗೆ ಬಿದ್ದು ಸಾವು!!

spot_img
- Advertisement -
- Advertisement -

ಕಾಬೂಲ್: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು ತಮ್ಮ ಹಿಡಿತ ಸಾಧಿಸಿದ ಬೆನ್ನಲ್ಲೇ ಜನರು ಭೀತಿಗೊಳಗಾಗಿ ದೇಶದಿಂದ ಪಲಾಯನಗೈಯಲು ವಿಮಾನ ನಿಲ್ದಾಣದಲ್ಲಿ ಸಾವಿರಾರು ಮಂದಿ ಜಮಾಯಿಸಿದ್ದು,ಕಾಬೂಲ್ ನಿಂದ ಹೊರಟಿದ್ದ ವಿಮಾನದ ಚಕ್ರವನ್ನು ಹಿಡಿದು ನೇತಾಡುತ್ತಿದ್ದ ಇಬ್ಬರು ಕೆಳಕ್ಕೆ ಬಿದ್ದು ಸಾವನ್ನಪ್ಪಿರುವ ಘಟನೆ ಸೋಮವಾರ ನಡೆದಿದೆ.

ವಿಮಾನದ ಟೈರ್​ ಸಮೀಪದ ಹಿಡಿಕೆಗೆ ಕಟ್ಟಿಕೊಂಡಿದ್ದ ಈ ಪ್ರಯಾಣಿಕರು ವಿಮಾನ ಟೇಕಾಫ್ ಆದ ನಿಮಿಷಗಳ ಬಳಿಕ ಕೆಳಗೆ ಬಿದ್ದರು. ಈ ವಿಮಾನವು ಕಾಬೂಲ್‌ನಿಂದ ಅಮೆರಿಕಕ್ಕೆ ತೆರಳುತ್ತಿತ್ತು ಎನ್ನಲಾಗಿದೆ. ತೆಹ್ರಾನ್ ಟೈಮ್ಸ್​ ಮೊದಲ ಬಾರಿಗೆ ಈ ವಿಡಿಯೊ ಟ್ವೀಟ್ ಮಾಡಿದ್ದು, ಕಾಬೂಲ್​ ವಿಮಾನ ನಿಲ್ದಾಣದಲ್ಲಿ ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ಇವರಿಬ್ಬರೂ ಕೆಳಗೆ ಬಿದ್ದಿದ್ದಾರೆ.

ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್​ ತಾಲೀಬಾನ್ ಉಗ್ರರ ವಶಕ್ಕೆ ಬರುತ್ತಿದ್ದಂತೆ ಅಲ್ಲಿನ ಜನರಲ್ಲಿ ಆತಂಕ ಶುರುವಾಗಿದೆ. ಸಾವಿರಾರು ಜನರು ದೇಶಬಿಟ್ಟು ಹೊರಗೆ ಹೋಗುವ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ವಿಮಾನ ನಿಲ್ದಾಣದಲ್ಲಿ ಜನಸಂದಣಿ ಹೆಚ್ಚಾಗಿದ್ದು, ನೂಕಾಟ-ತಳ್ಳಾಟ ಸಾಮಾನ್ಯ ಎನಿಸಿದೆ. ಜನರನ್ನು ನಿಯಂತ್ರಿಸಲು ಅಮೆರಿಕ ಸೇನಾಪಡೆಗಳು ಗಾಳಿಯಲ್ಲಿ ಗುಂಡು ಹಾರಿಸಿವೆ.

ಕಾಬೂಲ್ ವಿಮಾನ ನಿಲ್ದಾಣದಲ್ಲಿ ನಡೆದ ಗುಂಡು ಹಾರಾಟದ ವೇಳೆ ಈವರೆಗೆ ಐವರು ಮೃತಪಟ್ಟಿದ್ದಾರೆ. ವಿಮಾನ ಹತ್ತಲು ಏಕಾಏಕಿ ನೂರಾರು ಜನರು ಮುನ್ನುಗ್ಗಿ ಬಂದಾಗ ಪರಿಸ್ಥಿತಿ ಹದಗೆಟ್ಟು, ಗುಂಡು ಹಾರಾಟ ನಡೆಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!