Saturday, May 4, 2024
Homeಕರಾವಳಿಮಂಗಳೂರು: ಚಿತ್ರಮಂದಿರ ಮಾಲ್‌ಗಳಿಗೆ ಹೋಗಲು ಕೋವಿಡ್ -19 ಎರಡು ಲಸಿಕೆ ಕಡ್ಡಾಯ!

ಮಂಗಳೂರು: ಚಿತ್ರಮಂದಿರ ಮಾಲ್‌ಗಳಿಗೆ ಹೋಗಲು ಕೋವಿಡ್ -19 ಎರಡು ಲಸಿಕೆ ಕಡ್ಡಾಯ!

spot_img
- Advertisement -
- Advertisement -

ಮಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದ್ದಂತೆ ಹಲವಾರು ಕ್ಷೇತ್ರಗಳಿಗೆ ‍ಷರತ್ತುಬದ್ಧ ಸಡಿಲಿಕೆ ಸಿಗುತ್ತಿದೆ. ಜೊತೆಗೆ ರಾಜ್ಯ ಸರ್ಕಾರ ಹೊರಡಿಸಿದ ಕೊರೊನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಆಯಾ ಜಿಲ್ಲಾಡಳಿತ ಕ್ರಮ ಕೈಗೊಳ್ಳುತ್ತಿವೆ. ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲಾಡಳಿತವು ಮಾಲ್‌ಗಳು, ಚಿತ್ರಮಂದಿರ ಪ್ರವೇಶಿಸಲು ಕೋವಿಡ್ -19 ಲಸಿಕೆ ಪಡೆದಿರುವ ಪ್ರಮಾಣ ಪತ್ರಗಳನ್ನು ಕಡ್ಡಾಯಗೊಳಿಸಿದೆ.

ಮಲ್ಟಿಪ್ಲೆಕ್ಸ್‌ಗಳು, ಚಿತ್ರಮಂದಿರಗಳು ಮತ್ತು ಥಿಯೇಟರ್‌ಗಳು ಶೇ 100 ಪ್ರತಿಶತ ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಲು ಅವಕಾಶವಿದ್ದರೂ, ಲಸಿಕೆಯ ಎರಡು ಡೋಸ್‌ಗಳನ್ನು ಪಡೆದವರನ್ನು ಮಾತ್ರ ಒಳಗೆ ಬಿಡಲಾಗುತ್ತದೆ. ಎರಡು ಡೋಸ್‌ಗಳನ್ನು ಪಡೆದಿರುವ ಪ್ರಮಾಣ ಪತ್ರವನ್ನು ಒದಗಿಸಿದವರಿಗೆ ಮಾತ್ರ ಪ್ರವೇಶಕ್ಕೆ ಅನುಮತಿಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕೆ. ವಿ. ರಾಜೇಂದ್ರ ಈ ಕುರಿತು ಹೇಳಿದರು .

ಈ ನಿರ್ಧಾರವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗುವುದು ಮತ್ತು ಅಧಿಕಾರಿಗಳು ಲಸಿಕೆ ಹಾಕದ ಜನರ ಮೇಲೆ ಕಣ್ಣಿಡುತ್ತಾರೆ ಮತ್ತು ಅವರ ವಿರುದ್ಧ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ಲಸಿಕೆಗಳನ್ನು ಪಡೆಯದವರನ್ನು ಗುರುತಿಸಿ ಮತ್ತು ಅವರಿಗೆ ಲಸಿಕೆ ಹಾಕಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳುವ ಕಾರ್ಯವನ್ನು ಈಗ ನಡೆಸಲಾಗುತ್ತಿದೆ.ಲಸಿಕೆ ಮೇಳಗಳನ್ನು ಏರ್ಪಡಿಸಲಾಗಿದೆ.ಅಕ್ಟೋಬರ್ 16 ರ ನಂತರ, ಲಸಿಕೆಗಳ ದಾಖಲೆ ಇಲ್ಲದೆ ಸುತ್ತಾಡುತ್ತಿರುವ ಜನರನ್ನು ಅಧಿಕಾರಿಗಳು ಪ್ರಶ್ನಿಸುತ್ತಾರೆ.

- Advertisement -
spot_img

Latest News

error: Content is protected !!