Friday, June 5, 2026
Homeಕರಾವಳಿಮಂಗಳೂರುಸುಳ್ಯ; ಕಾರು ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಇಬ್ಬರು ಸಾವು; ಡಿಕ್ಕಿಯಾಗಿ ನಾಪತ್ತೆಯಾಗಿದ್ದ ಕಾರಿನ ಗುರುತು ಪತ್ತೆ

ಸುಳ್ಯ; ಕಾರು ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಇಬ್ಬರು ಸಾವು; ಡಿಕ್ಕಿಯಾಗಿ ನಾಪತ್ತೆಯಾಗಿದ್ದ ಕಾರಿನ ಗುರುತು ಪತ್ತೆ

- Advertisement -
- Advertisement -

ಸುಳ್ಯ; ಕನಕಮಜಲು ಗ್ರಾಮದ ಕೋಡಿ ತಿರುವಿನಲ್ಲಿ ಫೆ.8ರಂದು ರಾತ್ರಿ ಆತ್ಮಾರಾಮ ಭಜನಾ ಮಂದಿರದಲ್ಲಿ ಭಜನಾ ಕಾರ್ಯಕ್ರಮಕ್ಕೆ ಹೋಗಿ ಬರುತ್ತಿದ್ದಾಗ ಕಾರು ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಇಬ್ಬರು ಆಸ್ಪತ್ಪೆಯಲ್ಲಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಕನಕಮಜಲು ಕೋಡಿಯ ರಾಮಯ್ಯ ಶೆಟ್ಟಿ (67) ಹಾಗೂ ಜನಾರ್ದನ ಶೆಟ್ಟಿ (50 ) ಮೃತ ದುರ್ದೈವಿಗಳು.

ಇನ್ನು ಕಾರು ಡಿಕ್ಕಿಯಾಗಿ ನಿಲ್ಲಿಸದೇ ಪರಾರಿಯಾಗಿತ್ತು. ಇದೀಗ ಕಾರಿನ ಸುಳಿವು ಸಿಕ್ಕಿದೆ ಎನ್ನಲಾಗಿದೆ. ಕಾರು ಸುಳ್ಯದ ಬೀರಮಂಗಲದ ಆರ್ ಕೆ ಭಟ್ ಎಂಬವರಿಗೆ ಸೇರಿದ್ದು ಎನ್ನಲಾಗಿದ್ದು,  ಚಾಲಕ ತಲೆ ಮರೆಸಿಕೊಂಡಿದ್ದಾನೆ. ಸದ್ಯ ಆತನ ಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಳ್ಳಲು ನಿವಾಸಕ್ಕೆ ಮನೆಗೆ ತೆರಳಿದ್ದಾರೆ ಎನ್ನಲಾಗಿದೆ.

- Advertisement -

Latest News

error: Content is protected !!