Wednesday, June 24, 2026
Homeಕರಾವಳಿಉಡುಪಿಉಡುಪಿ : ಪ್ರತ್ಯೇಕ ಪ್ರಕರಣಗಳಲ್ಲಿ ಎರಡು ಬೈಕ್ ಕಳವು

ಉಡುಪಿ : ಪ್ರತ್ಯೇಕ ಪ್ರಕರಣಗಳಲ್ಲಿ ಎರಡು ಬೈಕ್ ಕಳವು

- Advertisement -
- Advertisement -

ಉಡುಪಿ : ಪ್ರತ್ಯೇಕ ಪ್ರಕರಣಗಳಲ್ಲಿ ಎರಡು ಬೈಕ್ ಗಳನ್ನು ಕಳ್ಳತನ ಮಾಡಲಾಗಿದೆ. ಬನ್ನಂಜೆ ಎಸ್‌ಬಿಐ ಎಟಿಎಂ ಎದುರು ಮೇ 17ರಂದು ಸಂಜೆ ವೇಳೆ ನಿಲ್ಲಿಸಿ ಹೋದ ರಾಜೇಶ್ ರಾವ್ ಎಂಬವರ 60 ಸಾವಿರ ರೂ. ಮೌಲ್ಯದ ಕೆಎ20 ಇವಿ 2357 ನಂಬರಿನ ಹೊಂಡಾ ಡಿಯೋ ಸ್ಕೂಟರ್ ಕಳ್ಳತನ ಮಾಡಲಾಗಿದೆ.

ಇನ್ನು ಉಡುಪಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ನಿಲ್ಲಿಸಿದ್ದ ಯಾದಗಿರಿ ಮೂಲದ ಪರಶುರಾಮ್ ಸಾಲಿಯಾರ್ ಎಂಬವರ ಕೆಎ33 ಆರ್‌2544 ನಂಬರಿನ35 ಸಾವಿರ ರೂ. ಮೌಲ್ಯದ ಹೀರೋ ಹೊಂಡಾ ಸ್ಪ್ಲೆಂಡರ್ ಪ್ರೊ ಬೈಕ್ ಕಳವಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!