Monday, May 20, 2024
Homeಕರಾವಳಿಬಂಟ್ವಾಳ: ಗಾಂಜಾ ಮಾರಾಟಕ್ಕೆ ಯತ್ನ, ನೇಪಾಳದ ಯುವಕ ಸೇರಿ ಇಬ್ಬರ ಬಂಧನ

ಬಂಟ್ವಾಳ: ಗಾಂಜಾ ಮಾರಾಟಕ್ಕೆ ಯತ್ನ, ನೇಪಾಳದ ಯುವಕ ಸೇರಿ ಇಬ್ಬರ ಬಂಧನ

spot_img
- Advertisement -
- Advertisement -

ಬಂಟ್ವಾಳ: 10.32 ಲಕ್ಷ ಮೌಲ್ಯದ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಮೆಲ್ಕಾರ್ ಬಳಿ ಇಂದು ಬಂಟ್ವಾಳ ಪೊಲೀಸರು ಬಂಧಿಸಿದ್ದಾರೆ.

ಮಂಗಳೂರು ಬಂದರು ನಿವಾಸಿ ಟಿ.ಪಿ ಫಾರೂಕ್‌ (50), ಹಾಗೂ ನೇಪಾಳ ಮೂಲದ ಪ್ರಸ್ತುತ ಮಂಗಳೂರಿನಲ್ಲಿ ಪಿಜಿಯಲ್ಲಿ ಸಾಗರ್‌ ಸಿಂಗ್‌ (22), ಬಂಧಿತ ಆರೋಪಿಗಳು. ಬಂಧಿತರಿಂದ 10,32,900 ರೂ. ಮೌಲ್ಯದ ಒಟ್ಟು 1.480 ಕಿ.ಗ್ರಾಂ ಗಾಂಜಾವನ್ನು ಮತ್ತು ಅದನ್ನು ಸಾಗಾಟ ಮಾಡಲು ಉಪಯೋಗಿಸಿದ ಮಾರುತಿ ಬ್ರೀಝಾ ಕಾರನ್ನು ವಶಪಡಿಸಿಕೊಳ್ಳಲಾಗಿದೆ.

ಇಬ್ಬರು ವ್ಯಕ್ತಿಗಳು ಬಿ.ಸಿ ರೋಡ್‌ನಿಂದ ಮಾಣಿ ಮಾರ್ಗದಲ್ಲಿ ಗಿರಾಕಿಗಳಿಗೆ ಮಾರಾಟ ಮಾಡಲು ಗಾಂಜಾ ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸ್‍ ನಿರೀಕ್ಷಕ ಚೆಲುವರಾಜು ಸಿಬ್ಬಂದಿಯೊಂದಿಗೆ ಮೆಲ್ಕಾರ್‍ ಬಸ್ಸು ನಿಲ್ದಾಣದ ಬಳಿ ಕಾರನ್ನು ತಡೆದು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ನೇಪಾಳ ಮೂಲದ ಸಾಗರ್‌ ಸಿಂಗ್‌ ಪ್ರಸ್ತುತ ಮಂಗಳೂರು ಪಿಜಿಯಲ್ಲಿ ವಾಸ ಮಾಡುತ್ತಿದ್ದು, ಟಿ.ಪಿ ಫಾರೂಕ್‌ ಜೊತೆ ಸೇರಿ ಗಾಂಜಾ ಮಾರಾಟ ಮಾಡುತ್ತಿದ್ದರು.

ಕಾರ್ಯಾಚರಣೆಯನ್ನು ಡಿಸಿಐಬಿ ಪೊಲೀಸ್‍ ನಿರೀಕ್ಷಕ ಚೆಲುವರಾಜು ಬಿ ರವರ ನೇತ್ರತ್ವದಲ್ಲಿ ಡಿಸಿಐಬಿ ಸಿಬ್ಬಂದಿಗಳಾದ ಲಕ್ಷ್ಮಣ ಕೆ.ಜಿ, ಉದಯ ರೈ, ಪ್ರವೀಣ್‍ ಎಂ, ತಾರಾನಾಥ್‍, ಪ್ರವೀಣ್‍ ರೈ, ಶೋನ್‍ಶಾ, ಸುರೇಶ್‍ ನಡೆಸಿದ್ದಾರೆ.

- Advertisement -
spot_img

Latest News

error: Content is protected !!