Tuesday, June 9, 2026
Homeತಾಜಾ ಸುದ್ದಿಚಿಕನ್ ಡಿಶ್ ಹೆಸರು ಕೇಳುತ್ತಿದ್ದಂತೆ ಕೋಮಾದಲ್ಲಿದ್ದವನಿಗೆ ಬಂತು ಪ್ರಜ್ಞೆ...

ಚಿಕನ್ ಡಿಶ್ ಹೆಸರು ಕೇಳುತ್ತಿದ್ದಂತೆ ಕೋಮಾದಲ್ಲಿದ್ದವನಿಗೆ ಬಂತು ಪ್ರಜ್ಞೆ…

- Advertisement -
- Advertisement -

ಚೀನಾ: ಚಿಕನ್ ಫಿಲೆಟ್ ಹೆಸರು ಹೇಳಿದಾಕ್ಷಣ ಕೋಮಾದಲ್ಲಿದ್ದ ವ್ಯಕ್ತಿಯೊಬ್ಬ ಎದದು ಬಂದ ಅಚ್ಚರಿಯ ಘಟನೆ ಚೀನಾದಲ್ಲಿ ನಡೆದಿದೆ. ಚೀನಾದ ತೈವಾನ್​ನ ಹ್ಸಿಂಚು ಕೌಂಟಿ ನಿವಾಸಿ 19 ವರ್ಷದ ಚಿಯು ಎಂಬಾತ ಎರಡು ತಿಂಗಳ ಹಿಂದೆ ಸಂಭವಿಸಿದ ಬೈಕ್​ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ. ಚಿಯುವಿನ ತಲೆ ಭಾಗಕ್ಕೆ ಪೆಟ್ಟು ಬಿದ್ದ ಹಿನ್ನಲೆ ಆತನ ನರವ್ಯೂಹಕ್ಕೆ ಹಾನಿಯಾಗಿತ್ತು. ಹೀಗಾಗಿ ಆತ ಕೋಮಾ ಸ್ಥಿತಿಗೆ ತಲುಪಿದ್ದ. ಆತನನ್ನು ಟನ್ ಯೆನ್ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರು ಶಸ್ತ್ರಚಿಕಿತ್ಸೆಗಳನ್ನು ಮಾಡಲಾಗಿದೆ. ಆದರೆ ಆತನಿಂದ ಯಾವುದೇ ಪ್ರತಿಕ್ರಿಯೆ ಇರಲಿಲ್ಲ. ಹೀಗಾಗಿ ವೈದ್ಯರು ಬದುಕೋದು ಸಂದೇಹ ಅಂದಿದ್ದರು.

ಚಿವು ಕುಟುಂದವರು ಆತನ ಆರೈಕೆಯಲ್ಲಿ ತೊಡಗಿದ್ದು, ಮತ್ತೆ ಪ್ರಜ್ಞೆ ಭರಿಸಲು ಪ್ರಯತ್ನಿಸುತ್ತಿದ್ದರು. ಈ ವೇಳೆ ಆತನ ಸಹೋದರ ಆತನ ಬಳಿ ಬಂದು ಕಿವಿಯಲ್ಲಿ ನಾನು ನಿನಗಿಷ್ಟವಾದ ಚಿಕನ್​ ಫಿಲೆಟ್ ತಿನ್ನಲು ಹೋಗುತ್ತಿದ್ದೇನೆ ಎಂದು ಹೇಳಿದ್ದಾನೆ. ಈ ಮಾತು ಕೇಳುತ್ತಿದ್ದಂತೆ ಚಿಯು ನಾಡಿ ಬಡಿತ ಹೆಚ್ಚಾಗಿದ್ದು, ಕೆಲ ಕ್ಷಣಗಳ ಬಳಿಕ ಪ್ರಜ್ಞೆ ಬಂದಿದೆ. 62 ದಿನಗಳಿಂದ ವಿವಿಧ ಚಿಕಿತ್ಸೆ ನೀಡಿದರೂ ಸ್ಪಂದಿಸದ ಚಿಯು ಚಿಕನ್​ ಹೆಸರು ಕೇಳಿ ಮರಳಿ ಪ್ರಜ್ಞೆ ಪಡೆದಿರುವುದು ವೈದ್ಯರಿಗೂ ಆಶ್ಚರ್ಯವುಂಟು ಮಾಡಿದೆ. ಸದ್ಯ ಚಿಯು ಗುಣಮುಖನಾಗುತ್ತಾನೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

- Advertisement -

Latest News

error: Content is protected !!