Saturday, June 6, 2026
Homeಕರಾವಳಿಮಂಗಳೂರಿನಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದ ಪೊಲೀಸರು

ಮಂಗಳೂರಿನಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದ ಪೊಲೀಸರು

- Advertisement -
- Advertisement -

ಮಂಗಳೂರು; ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದುಕೊಂಡ ಘಟನೆ ಕುದ್ರೋಳಿ ಅಳಕೆ ಮಾರ್ಕೆಟ್ ಬಳಿ ನಡೆದಿದೆ.

ಕೋಡಿಕಲ್ ಸಮೀಪದ ಅಶೋಕ ನಗರದ ಪ್ರಮೋದ್‌ರಾಜ್ (46) ಮತ್ತು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯ ಓಂಕಾರ್ ಮೂರ್ತಿ (49) ಬಂಧಿತರು. ಕುದ್ರೋಳಿ ಅಳಕೆ ಮಾರ್ಕೆಟ್ ಬಳಿ ಪೊಲೀಸರು ಗಸ್ತು ನಿರತರಾಗಿದ್ದ ವೇಳೆ ಇಬ್ಬರು ಅನುಮಾನಾಸ್ಪದವಾಗಿ ಓಡಾಡುತ್ತಿರುವುದು ಕಂಡು ಬಂದಿದ್ದು,ತಕ್ಷಣ ಅವರನ್ನು ವಶಕ್ಕೆ ಪಡೆದು ವಿಚಾರಿಸಿದ್ದಾರೆ‌‌.

ಬೆಳಗಿನ ಜಾವ ಕಳ್ಳತನ ಅಥವಾ ಇನ್ಯಾವುದೋ ಕೃತ್ಯ ಮಾಡುವ ಉದ್ದೇಶದಿಂದ ಇವರು ಹೊಂಚು ಹಾಕುತ್ತಿದ್ದರು ಎನ್ನುವುದು ತಿಳಿದು ಬಂದಿದೆ.

- Advertisement -

Latest News

error: Content is protected !!