
ನವದೆಹಲಿ: ನೂತನ ಐಟಿ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಅಶ್ವಿನಿ ವೈಷ್ಣವ್ ಟ್ವಿಟ್ಟರ್ ಗೆ ಎಚ್ಚರಿಕೆ ನೀಡಿದ್ದಾರೆ. ಭಾರತದ ಕಾನೂನು ಪರಮೋಚ್ಚ, ಅದನ್ನು ಉಲ್ಲಂಘಿಸಲು ಸಾಧ್ಯವಿಲ್ಲ, ಅವಕಾಶವೂ ನೀಡುವುದಿಲ್ಲ ಎಂದಿದ್ದಾರೆ.
ದೇಶದಲ್ಲಿನ ಹೊಸ ಕಾನೂನುಗಳನ್ನು ಅನುಸರಿಸದ ಆರೋಪ ಅಮೆರಿಕಾ ಮೂಲದ ಟ್ವಿಟರ್ ಕಂಪನಿ ಮೇಲಿದೆ. ಪ್ರಮುಖ ಮೂರು ಹುದ್ದೆಗಳ ನೇಮಕ ಸೇರಿದಂತೆ ನೂತನ ಐಟಿ ನಿಯಮಗಳ ಅನುಸರಣೆ ಕಡ್ಡಾಯವಾಗಿದೆ. ಜೂನ್ 26ರಿಂದಲೂ ನೂತನ ಐಟಿ ನಿಯಮಗಳು ಜಾರಿಗೆ ಬಂದಿದ್ದರೂ ಸರ್ಕಾರದಿಂದ ಪದೇ ಪದೇ ಎಚ್ಚರಿಕೆ ಬಂದರೂ ಕೂಡಾ ಟ್ವಿಟರ್ ನೂತನ ನಿಯಮಗಳನ್ನು ಪಾಲಿಸುತ್ತಿಲ್ಲ.
ಭಾರತದಲ್ಲಿ ಕಾರ್ಯಕ್ಷೇತ್ರ, ಭಾರತದಿಂದ ಹಣ ಗಳಿಕೆ, ಭಾರತದಿಂದ ಸವಲತ್ತು ಪಡೆದು ಇದೀಗ ಅಮೆರಿಕ ನಿಯಮ ಪಾಲಿಸುತ್ತೇವೆ ಅನ್ನೋದು ಸರಿಯಲ್ಲ. ಇಲ್ಲಿನ ನೆಲದ ಕಾನೂನು ಶ್ರೇಷ್ಠ. ಅದನ್ನು ಎಲ್ಲರೂ ಅನುಸರಿಸಬೇಕು. ಭಾರತದಲ್ಲಿ ಟ್ವಿಟರ್‌ಗಾಗಿ ಬೇರೆ ಕಾನೂನಿನಲ್ಲ. ಎಲ್ಲರಿಗೂ ಒಂದೇ ಕಾನೂನು. ಅದನ್ನು ಪಾಲಿಸಲಬೇಕು ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ.


