Saturday, June 6, 2026
Homeಕರಾವಳಿಬೆಳ್ತಂಗಡಿ: ವಿವಾಹಿತ ಮಹಿಳೆ, ತನ್ನ ಹೆಣ್ಣು ಮಗುವಿನೊಂದಿಗೆ ನಾಪತ್ತೆ

ಬೆಳ್ತಂಗಡಿ: ವಿವಾಹಿತ ಮಹಿಳೆ, ತನ್ನ ಹೆಣ್ಣು ಮಗುವಿನೊಂದಿಗೆ ನಾಪತ್ತೆ

- Advertisement -
- Advertisement -

ಬೆಳ್ತಂಗಡಿ: ಮಹಿಳೆಯೋರ್ವಳು ತನ್ನ ಮಗಳನ್ನು ಕರೆದುಕೊಂಡು ಮನೆಯಿಂದ ಹೋದವಳು ಅತ್ತ ಮನೆಗೂ ಬಾರದೇ ಇತ್ತ ಸಂಬಂಧಿಕರ ಮನೆಗೂ ಹೋಗದೇ ನಾಪತ್ತೆಯಾಗಿರುವ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ದೂರು ದಾಖಲಾಗಿದೆ.

ತಾಲೂಕಿನ ಮುಂಡಾಜೆ ಗ್ರಾಮದ ಅಗರಿ ಮನೆಯ ತೋಮಸ್‌ ಪಿ ಡಿ ಎಂಬವರ ಪತ್ನಿ ನೀನು ಒ ಎಸ್‌ (24 ವರ್ಷ) ಮತ್ತು ಅವರ ಮೂರು ವರ್ಷದ ಮಗಳು ಇವನಾ ಮರಿಯಾ ತೋಮಸ್‌ ನಾಪತ್ತೆಯಾಗಿದ್ದಾರೆ.

ಪ್ರಕರಣದ ಸಾರಾಂಶ:
ಜುಲೈ 4 ರಂದು ರಾತ್ರಿ 10.00 ಗಂಟೆ ಸಮಯಕ್ಕೆ ಗಂಡ ಸ್ನಾನ ಮಾಡುತ್ತಿದ್ದ ವೇಳೆಯಲ್ಲಿ ನೀನು ಒ ಎಸ್‌ ಮತ್ತು ಅವರ ಮಗಳಾದ ಇವನಾ ಮರಿಯಾ ಇವರು ಮನೆಯಲ್ಲಿ ಯಾರಿಗೂ ಹೇಳದೇ ಮನೆಯಿಂದ ಎಲ್ಲಿಯೋ ಹೋಗಿ ಕಾಣೆಯಾಗಿದ್ದಾರೆ. ಹಾಗೆಯೆ ತಾಯಿ ಮತ್ತು ಮಗು ಕೇರಳ ರಾಜ್ಯದ ಅರುಣ್‌ ತಂಗಚ್ಚನ್‌ ಎಂಬವರ ಜೊತೆ ತೆರಳಿರಬಹುದು ಎನ್ನುವ ಅನುಮಾನವಿದ್ದು, ಕೂಡಲೇ ಪತ್ನಿ ಮತ್ತು ಮಗುವನ್ನು ಹುಡುಕಿ ಕೊಡುವಂತೆ ಪತಿ ತೋಮಸ್‌ ಪಿ ಡಿ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

- Advertisement -

Latest News

error: Content is protected !!