Wednesday, June 3, 2026
Homeಕರಾವಳಿಮೂಡಬಿದರೆ; ತಂದೆಯ ಖಾಸಗಿ ವಿಡಿಯೋ ವೈರಲ್ ಆಗಿದ್ದರಿಂದ ಯುವಕ ನೇಣಿಗೆ ಶರಣು ಪ್ರಕರಣ; ವಿಡಿಯೋ ವೈರಲ್...

ಮೂಡಬಿದರೆ; ತಂದೆಯ ಖಾಸಗಿ ವಿಡಿಯೋ ವೈರಲ್ ಆಗಿದ್ದರಿಂದ ಯುವಕ ನೇಣಿಗೆ ಶರಣು ಪ್ರಕರಣ; ವಿಡಿಯೋ ವೈರಲ್ ಮಾಡಿದಾತ ಅಂದರ್

- Advertisement -
- Advertisement -

ಮೂಡಬಿದರೆಯಲ್ಲಿ ಯುವಕ ಸುಮಂತ್ ಆತ್ಮಹತ್ಯೆಗೆ ಶರಣಾದ ವಿಚಾರ ತಿರುವು ಪಡೆದುಕೊಂಡಿದೆ. ಸುಮಂತ್ ತಂದೆ ಮಹಿಳೆಯೊಂದಿಗೆ ಕಳೆದಿದ್ದ ಖಾಸಗಿ ವಿಡಿಯೋವೊಂದು ವೈರಲ್ ಆಗಿದ್ದರಿಂದ ನೊಂದು  ಸುಮಂತ್ ನೇಣಿಗೆ ಶರಣಾಗಿದ್ದ.

ತಂದೆ ಮಹಿಳೆಯೊಂದಿಗಿದ್ದ  ವಿಡಿಯೋವನ್ನು ಚಿತ್ರೀಕರಿಸಿದ್ದ ವ್ಯಕ್ತಿಯೊಬ್ಬ ಅವರಲ್ಲಿ ಹಣಕ್ಕಾಗಿ ಬೇಡಿಕೆ ಇಟ್ಟು ಬಳಿಕ ಹಣ ಸಿಗದೇ ಇದ್ದಾಗ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿದ್ದ. ವಿಡಿಯೋ  ವೈರಲ್ ಆಗುತ್ತಿದ್ದಂತೆ  ಸುಮಂತ್ ತನ್ನ ತಂದೆಯೊಂದಿಗೆ ಜಗಳವಾಡಿದ್ದಾನೆ. ಅಲ್ಲದೇ ತೀವ್ರ ಅವಮಾನಕ್ಕೆ ಒಳಗಾಗಿದ್ದ. ಮಾನಸಿಕವಾಗಿ ಕುಗ್ಗಿ ಹೋಗಿದ್ದ ಎನ್ನಲಾಗಿದೆ. ಇದರಿಂದ ಹತಾಶೆಯಿಂದ ಮಗ ಸಾವಿಗೆ ಶರಣಾಗಿದ್ದಾನೆ.

ವಿಡಿಯೋ ಚಿತ್ರೀಕರಿಸಿದ ವೈರಲ್ ಮಾಡಿದ ಆರೋಪಿ ಜಯಕುಮಾರ್ ಎಂಬಾತನನ್ನು ಮೂಡಬಿದಿರೆ ಪೊಲೀಸರು ಬಂಧಿಸಿದ್ದಾರೆ.

- Advertisement -

Latest News

error: Content is protected !!