Sunday, June 23, 2024
Homeಕರಾವಳಿಮಂಗಳೂರು; ನಾಮಪತ್ರ ವಾಪಾಸ್ ಪಡೆದು ಜೆಡಿಎಸ್ ಅಭ್ಯರ್ಥಿ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್; ನನ್ನನ್ನು ಅಪಹರಿಸಲಾಗಿತ್ತು ಎಂದ...

ಮಂಗಳೂರು; ನಾಮಪತ್ರ ವಾಪಾಸ್ ಪಡೆದು ಜೆಡಿಎಸ್ ಅಭ್ಯರ್ಥಿ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್; ನನ್ನನ್ನು ಅಪಹರಿಸಲಾಗಿತ್ತು ಎಂದ ಅಲ್ತಾಫ್ ಕುಂಪಲ

spot_img
- Advertisement -
- Advertisement -

ಮಂಗಳೂರು: ನಾಮಪತ್ರ ವಾಪಾಸ್ ಪಡೆದು ಜೆಡಿಎಸ್ ಅಭ್ಯರ್ಥಿ ನಾಪತ್ತೆ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದೆ. ನನ್ನನ್ನು ಅಪಹರಿಸಲಾಗಿತ್ತು ಎಂದ ಅಲ್ತಾಫ್ ಕುಂಪಲ ಆರೋಪಿಸಿದ್ದಾರೆ.

 “ನಾನು ಎಲ್ಲೂ ಓಡಿಹೋಗಿಲ್ಲ, ಕಾಂಗ್ರೆಸ್ ನವರು ನನ್ನನ್ನು ಅಪಹರಿಸಿ ಬೆದರಿಸಿ ನಾನು ನಾಮಪತ್ರ ಹಿಂದೆ ಪಡೆಯುವಂತೆ ಮಾಡಲಾಗಿದೆ. ನನಗೆ ಯಾವುದೇ ರೀತಿಯಲ್ಲಿ ಆಮಿಷ ಒಡ್ಡಲಾಗಿಲ್ಲ. ಈ ಕುರಿತು ಪೊಲೀಸ್ ಕಮಿಷನರ್ ಅವರಿಗೆ ಭದ್ರತೆ ನೀಡುವಂತೆ ಮನವಿ ಮಾಡಲಾಗಿದೆ” ಎಂದು ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದ್ದಾರೆ,

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಜೆಡಿಎಸ್ ರಾಜ್ಯ ವಕ್ತಾರ ಎಂ.ಬಿ. ಸದಾಶಿವ ಮಂಗಳೂರು ಕ್ಷೇತ್ರದಲ್ಲಿ ಜನಸಾಮಾನ್ಯರಿಗೆ ಬೇಕಾದ ಅಲ್ತಾಫ್ ಕುಂಪಲ ಎಂಬ ಒಬ್ಬ ವ್ಯಕ್ತಿಯನ್ನು ಅವರ ಸಮಾಜಸೇವೆಯನ್ನು ಗುರುತಿಸಿ ಟಿಕೆಟ್ ನೀಡಿದ್ದೇವೆ. ಆದರೆ ಎರಡು ದಿನಗಳ ಹಿಂದೆ ಅವರು ಹಬ್ಬದ ದಿನ ಮಸೀದಿಯಿಂದ ಹೊರಬರುವಾಗ ತಂಡವೊಂದು ಅವರನ್ನು ಬೆದರಿಸಿ ಚುನಾವಣಾಧಿಕಾರಿಯ ಬಳಿಗೆ ಕರೆದೊಯ್ದು ನಾಮಪತ್ರ ಹಿಂತೆಗೆದುಕೊಳ್ಳುವಂತೆ ಮಾಡಿದೆ.

ಇದು ಎಲ್ಲರೂ ಚಿಂತಿಸಬೇಕಾದ ವಿಷಯವಾಗಿದೆ. ಯಾಕೆಂದರೆ ಒಬ್ಬ ಸಾಮಾನ್ಯ ಕಾರ್ಯಕರ್ತನನ್ನೇ ಎದುರಿಸಲಾಗದವರು ಸಮಾಜದ ಜನರನ್ನು ಹೇಗೆ ನಡೆಯಿಸಿಕೊಳ್ಳಬಹುದು?” ಎಂದಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ನಜೀರ್ ಉಳ್ಳಾಲ್, ವಸಂತ ಪೂಜಾರಿ, ಅಶ್ರಫ್ ಸಾಜೀದ್, ಆಶ್ರಪ್ ಖಾಜಿ, ಯುವ ಜನತಾದಳದ ಅಕ್ಷಿತ್ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!