Sunday, May 19, 2024
Homeಕರಾವಳಿಬೆಳ್ತಂಗಡಿ ಗಂಗಾಧರ ಗೌಡರ ಮನೆ ಸೇರಿ ಮೂರು ಕಡೆ ಐಟಿ ದಾಳಿ ಪ್ರಕರಣ: ಲಕ್ಷಾಂತರ ರೂಪಾಯಿ...

ಬೆಳ್ತಂಗಡಿ ಗಂಗಾಧರ ಗೌಡರ ಮನೆ ಸೇರಿ ಮೂರು ಕಡೆ ಐಟಿ ದಾಳಿ ಪ್ರಕರಣ: ಲಕ್ಷಾಂತರ ರೂಪಾಯಿ ಹಣ , ಚಿನ್ನ , ದಾಖಲೆ ಪತ್ರ ವಶಕ್ಕೆ

spot_img
- Advertisement -
- Advertisement -

ಬೆಳ್ತಂಗಡಿ : ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಪಕ್ಷದ ಕೆಪಿಸಿಸಿ ಉಪಾಧ್ಯಕ್ಷ ಗಂಗಾಧರ ಗೌಡರಿಗೆ ಏ.24 ರಂದು ಬೆಳಗ್ಗೆ 6:30 ಕ್ಕೆ ಆದಾಯ‌ ಇಲಾಖೆ ಅಧಿಕಾರಿಗಳು (ಐಟಿ) ಶಾಕ್ ನೀಡಿದೆ.

ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮದ ಬಂಗಾಡಿ ಫಾರ್ಮ್ ಹೌಸ್ , ಬೆಳ್ತಂಗಡಿ ತಾಲೂಕು ಆಸ್ಪತ್ರೆಯ ಪಕ್ಕದಲ್ಲಿರುವ ಮನೆ, ಲಾಯಿಲ ಪ್ರಸನ್ನ ಎಜುಕೇಶನ್ ಟ್ರಸ್ಟ್ ಮೇಲೆ ಏಕಕಾಲದಲ್ಲಿ ಏ.24 ರ ಬೆಳಗ್ಗೆ 6:30 ಕ್ಕೆ ದಾಳಿ ಮಾಡಿದ್ದರು. ಈ ವೇಳೆ ಲಕ್ಷಾಂತರ ನಗದು ಹಣ , ಚಿನ್ನಾಭರಣ , ದಾಖಲೆ ಪತ್ರಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಇಂದಬೆಟ್ಟು ಗ್ರಾಮದ ಬಂಗಾಡಿ ಫಾರ್ಮ್ ಹೌಸ್ ನಲ್ಲಿ ಮಧ್ಯಾಹ್ನ 2:30 ರವರೆಗೆ ಶೋಧ ಕಾರ್ಯ ನಡೆಸಿ ಕಾರ್ಯಾಚರಣೆ ಅಂತ್ಯ ಮಾಡಿದ್ದರು. ಬೆಳ್ತಂಗಡಿ ಮತ್ತು ಪ್ರಸನ್ನ ಎಜುಕೇಶನ್ ಟ್ರಸ್ಟ್ ಮೇಲೆ ರಾತ್ರಿ 10:15 ರ ವರೆಗೆ ಶೋಧ ಕಾರ್ಯಾಚರಣೆ ಅಂತ್ಯಗೊಳಿಸಿದ್ದರು.

ಐಟಿ ದಾಳಿ ವೇಳೆ ಪತ್ತೆಯಾಗಿದ ಸೊತ್ತುಗಳು : ಐಟಿ ಅಧಿಕಾರಿಗಳಿಗೆ ದಾಖಲೆಗಳು ಇಲ್ಲದ ಹಣ ಬೆಳ್ತಂಗಡಿ ಮನೆಯಲ್ಲಿ ಗಂಗಾಧರ ಗೌಡರ ಪತ್ನಿ ಪ್ರಸನ್ನ ಗಂಗಾಧರ ಗೌಡರ ಲಾಕರಿನಲ್ಲಿ 50 ಲಕ್ಷ ನಗದು , ರಂಜನ್ ಗೌಡ ಲಾಕರಿನಲ್ಲಿ 10 ಲಕ್ಷ , ಗಂಗಾಧರ ಗೌಡ ಮಗಳು ರೇಷ್ಮ.ಜಿ.ಗೌಡ ಅವರ 8 ವರ್ಷದ ಮಗಳ ಲಾಕರಿನಲ್ಲಿ‌ 3.90 ಲಕ್ಷ ಹಣ ಸೇರಿದಂತೆ ಸುಮಾರು 63 ಲಕ್ಷ ರೂಪಾಯಿಗೂ ಮಿಕ್ಕಿ ಹಣ ಪತ್ತೆಯಾಗಿದೆ ಎನ್ನಲಾಗಿದೆ. ಅದಲ್ಲದೆ ಚಿನ್ನಾಭರಣ , ದಾಖಲೆ ಪತ್ರಗಳನ್ನು ವಶಕ್ಕೆ ಪಡೆದುಕೊಂಡು ಮಂಗಳೂರು ಕಚೇರಿಗೆ ತೆಗೆದುಕೊಂಡು ಹೋಗಿದ್ದಾರೆ.

ಮಂಗಳೂರು , ಬೆಂಗಳೂರು ,ದೆಹಲಿ ಕಚೇರಿಯ 20 ಕ್ಕೂ ಅಧಿಕ ಐಟಿ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಮಂಗಳೂರು ನಗರದ ಪಾಂಡೇಶ್ವರ ಪೊಲೀಸ್ ಠಾಣೆಯ 4 ಜನ ಪೊಲೀಸರು ಹಾಗೂ ಬೆಳ್ತಂಗಡಿ ಚುನಾವಣಾಧಿಕಾರಿ ಚಂದ್ರಕಾಂತ್ ಕೂಡ ಸಾಥ್ ನೀಡಿದ್ದರು.ಇನ್ನೂ ಮಾಜಿ ಸಚಿವ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ಗಂಗಾಧರ ಗೌಡರ ಐಟಿ ದಾಳಿ ಬಗ್ಗೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಲಿದ್ದಾರೆ.

- Advertisement -
spot_img

Latest News

error: Content is protected !!