ವಿಟ್ಲ;ಯುವಕನನ್ನು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದೆ. ಆರೋಪಿ ಅದ್ರಾಮ ಪೊಲೀಸರ ವಿಚಾರಣೆ ವೇಳೆ ಹಲವು ವಿಚಾರ ಬಾಯ್ಬಿಟ್ಟಿದ್ದಾನೆ.
ಕೊಲೆಯಾದ ಸಮಾದ್ ಹಾಗೂ ಅದ್ರಾಮ ಇಬ್ಬರು ಸ್ನೇಹಿತರಾಗಿದ್ದರು.ಅದ್ರಾಮ, ಸಮದ್ ಗಾಂಜಾ ವ್ಯಸನಿಗಳಾಗಿದ್ದರು. ಜೊತೆಗೆ ಸಮದ್ ನೊಂದಿಗೆ ಅದ್ರಾಮ್ ಅನೈತಿಕ ಸಂಬಂಧ ಹೊಂದಿದ್ದ.
ಸಮಾದ್ ನನ್ನು ಮನೆಯವರು ಉದ್ಯೋಗಕ್ಕಾಗಿ ಬೆಂಗಳೂರಿಗೆ ಕಳುಹಿಸಿದ್ದರು. ಇದು ಅದ್ರಾಮನಿಗೆ ಇಷ್ಟವಿರಲಿಲ್ಲ. ಇದಕ್ಕೆ ಅನೇಕ ಬಾರಿ ಆತ ಸಮದ್ ಜೊತೆ ಫೋನ್‌ನಲ್ಲಿ ಜಗಳವಾಡಿದ್ದಾನೆ.ಇದಲ್ಲದೆ ಅದ್ರಾಮ್ ಸಮಾದ್ ನನ್ನು ಊರಿಗೆ ಬರುವಂತೆ ಒತ್ತಾಯಿಸಿದ್ದು ನ.1 ರಂದು ಊರಿಗೆ ಬಂದಿದ್ದ. .
ಊರಿಗೆ ಬಂದ ಸಮಾದ್ ನನ್ನು ರಿಕ್ಷಾದಲ್ಲಿ ಕೂರಿಸಿ ಅದ್ರಾಮ್ ಇರಾ ಸಮೀಪ್ ಗುಡ್ಡವೊಂದಕ್ಕೆ ಕರೆದುಕೊಂಡು ಹೋಗಿದ್ದಾನೆ.ಅಲ್ಲಿ ಗಾಂಜಾ ಸೇವಿಸಿದ ಬಳಿಕ ಬೆಂಗಳೂರಿಗೆ ತೆರಳದಂತೆ ಇವರಿಬ್ಬರ ಮಧ್ಯೆ ಜಗಳ ಆಗಿದೆ. ನಂತರ ಇಬ್ಬರೂ ಗುಡ್ಡೆಯಲ್ಲಿ ಮಲಗಿದ್ದರು. ಬಳಿಕ ಅದ್ರಾಮ ರಿಕ್ಷಾದಲ್ಲಿ ಇರಿಸಿದ್ದ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸಮದ್ ನನ್ನು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.