- Advertisement -
- Advertisement -
ಬೆಳ್ತಂಗಡಿ : ಕಲ್ಮಂಜ ಗ್ರಾಮದ ಬೆರ್ಕೆ ಎಂಬಲ್ಲಿ ಎಂ.ಎಸ್. ಪ್ರಕಾಶ್ ಎಂಬವರ ತೋಟಕ್ಕೆ ಎ.6 ರಂದು ಶನಿವಾರ ತಡರಾತ್ರಿ ಒಂಟಿ ಸಲಗ ಪ್ರವೇಶಿಸಿ ಕೃಷಿಹಾನಿ ಉಂಟುಮಾಡಿದೆ. ಸಲಗವು ಸುಮಾರು 40ಕ್ಕಿಂತ ಅಧಿಕ ಬಾಳೆ ಗಿಡ 5 ಅಡಿಕೆ ಮರಗಳನ್ನು ಧ್ವಂಸಗೊಳಿಸಿದೆ.

ಕಳೆದ ಸುಮಾರು ಎರಡು ತಿಂಗಳ ಹಿಂದೆ ಇದೇ ತೋಟಕ್ಕೆ ಪ್ರವೇಶಿಸಿದ್ದ ಕಾಡಾನೆ ಆಗ ಈಚಲ ಮರವನ್ನು ಮುರಿದು ಹಾಕಿತ್ತು. ಮನೆಯವರು ಅದನ್ನು ಹಾಗೆ ಬಿಟ್ಟಿದ್ದರು. ಈ ಈಚಲ ಮರವನ್ನು ಆನೆ ಶನಿವಾರ ಸಂಪೂರ್ಣ ಪುಡಿಗಟ್ಟಿದೆ.

ತಿಂಗಳ ಹಿಂದೆ ಕಾಡಾನೆಗಳು ಚಾರ್ಮಾಡಿ, ಮುಂಡಾಜೆ, ಕಡಿರುದ್ಯಾವರ, ಕಲ್ಮಂಜ,ಬೆಳಾಲು, ಗೇರುಕಟ್ಟೆ ಮೊದಲಾದ ಕಡೆ ಸಾಕಷ್ಟು ದಾಂಧಲೆ ನಡೆಸಿ ಉಪ್ಪಿನಂಗಡಿ ಭಾಗದಲ್ಲಿಯು ಪ್ರತ್ಯಕ್ಷವಾಗಿದ್ದು,ಇದೀಗ ಮತ್ತೆ ಕಾಡಾನೆ ಉಪಟಳ ಈ ಭಾಗಗಳಲ್ಲಿ ಕಾಣಿಸಿಕೊಂಡಿದೆ.
- Advertisement -