Thursday, June 4, 2026
Homeಕರಾವಳಿಮಂಗಳೂರುಮಂಗಳೂರು: ಫರಂಗಿಪೇಟೆಯಲ್ಲಿ ತುಂಗಾಸ್ ಮನಸ್ವಿನಿ ಆಸ್ಪತ್ರೆ ಉದ್ಘಾಟನೆ

ಮಂಗಳೂರು: ಫರಂಗಿಪೇಟೆಯಲ್ಲಿ ತುಂಗಾಸ್ ಮನಸ್ವಿನಿ ಆಸ್ಪತ್ರೆ ಉದ್ಘಾಟನೆ

- Advertisement -
- Advertisement -

ಮಂಗಳೂರು: ಡಾ. ತುಂಗಾಸ್ ಮನಸ್ವಿನಿ ಆಸ್ಪತ್ರೆ ಇಂದು ಫರಂಗಿಪೇಟೆಯ ಅರ್ಕುಳದಲ್ಲಿ ಉದ್ಘಾಟನೆಗೊಂಡಿತು.ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಮತ್ತು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಸೇರಿದಂತೆ ಹಲವಾರು ಗಣ್ಯರು ಆಸ್ಪತ್ರೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಶಾಸಕ ವೇದವ್ಯಾಸ ಕಾಮತ್, ಭವಿಷ್ಯದಲ್ಲಿ ಮಾನಸಿಕ ಆರೋಗ್ಯ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆ ನೀಡಲಿ ಎಂದು ಆಸ್ಪತ್ರೆಯ ಆಡಳಿತ ಮಂಡಳಿಗೆ ಶುಭ ಹಾರೈಸಿದರು.

ಖ್ಯಾತ ಮಾನಸಿಕ ರೋಗ ಚಿಕಿತ್ಸಾ ತಜ್ಞ ಡಾ. ರವೀಶ ತುಂಗ ಐರೋಡಿಯವರ ನೇತೃತ್ವದಲ್ಲಿ ಆಸ್ಪತ್ರೆ ಸ್ಥಾಪಿಸಲ್ಪಟ್ಟಿದೆ.

- Advertisement -

Latest News

error: Content is protected !!