ತುಮಕೂರು: 45 ವರ್ಷದ ವ್ಯಕ್ತಿಯೋರ್ವನು 25 ವರ್ಷದ ಯುವತಿಯನ್ನು ಮದುವೆಯಾಗಿರುವ ಫೋಟೋವೊಂದು ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿತ್ತು. ಮೇಲ್ನೋಟಕ್ಕೆ ಇದು ಮದುವೆಯಂತೆ ಕಂಡು ಬಂದರೂ ಯಾರಿಗೂ ಇದರ ಹಿಂದಿರುವ ರಿಯಲ್ ಕಹಾನಿ ಗೊತ್ತಿರಲಿಲ್ಲ.
ಆದರೆ ಇದೀಗ ಅದರ ಅಸಲಿ ಕಥೆ ಬಯಲಾಗಿದೆ. ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ಹೋಬಳಿ ಅಕ್ಕಿಮರಿಪಾಳ್ಯ ಗ್ರಾಮದ ಶಂಕರಣ್ಣ (45 ವರ್ಷ), ಸಂತೇಮಾವತ್ತೂರು ಗ್ರಾಮದ ಮೇಘನಾ (25) ಮದುವೆಯಾಗಿರುವ ನೂತನ ವಧುವರರು.

ಮೇಘನಾ ಈ ಹಿಂದೆಯೇ ಮದುವೆಯಾಗಿದ್ದು ಪತಿ ಎರಡು ವರ್ಷಗಳ ಹಿಂದೆ ಪತ್ನಿಯನ್ನು ತೊರೆದಿದ್ದ ಮನೆ ಬಿಟ್ಟು ಹೋಗಿದನ್ನು ಎನ್ನಲಾಗಿದ್ದು ಪತಿ ಈವರೆಗೂ ಮನೆಗೆ ಮರಳಲಿಲ್ಲ , ಇತ್ತಾ ಶಂಕಣ್ಣನಿಗೆ ಮದುವೆಯಾಗಿರಲಿಲ್ಲ, ಹೆಣ್ಣು ಹುಡುಕಿ ಸುಸ್ತಾಗಿ ಮದುವೇಯೇ ಬೇಡ ಎಂದುಕೊಂಡಿದ್ದ ಶಂಕರನನ್ನು ಮದುವೆಯಾಗಲು ಗಂಡನಿಗೆ ಡಿವೋರ್ಸ್ ಕೊಟ್ಟಿದ್ದ ಮೇಘನಾ ತಾನೇ ಸ್ವತಃ ಮನಸ್ಸು ಮಾಡಿದ್ದಾಳೆ. ಈ ಹಿನ್ನಲೆಯಲ್ಲಿ ಈ ಇಬ್ಬರು ಬಂಧುಗಳ ಸಮ್ಮುಖದಲ್ಲಿ ಮೆಣಸಿನಕೆರೆ ದೊಡ್ಡಿ ಹುಚ್ಚಮಾರಮ್ಮನ ದೇವಾಲಯದ ಬಳಿ ವಿವಾಹವಾಗಿದ್ದಾರೆ.