Saturday, June 6, 2026
Homeಕರಾವಳಿಉಡುಪಿತುಳುವೆರ್ ಕುಡ್ಲ ಸಂಘಟನೆಯ ಲೋಗೋ ಬಿಡುಗಡೆ ಮಾಡಿದ ಸಿಎಂ

ತುಳುವೆರ್ ಕುಡ್ಲ ಸಂಘಟನೆಯ ಲೋಗೋ ಬಿಡುಗಡೆ ಮಾಡಿದ ಸಿಎಂ

- Advertisement -
- Advertisement -

ಬೆಂಗಳೂರು: ತುಳುವೆರ್ ಕುಡ್ಲ(ರಿ) ಸಂಘಟನೆಯ ಲೋಗೋ ಬಿಡುಗಡೆಯಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ವಿಧಾನಸೌಧದ ಮುಖ್ಯಮಂತ್ರಿಗಳ ಕಚೇರಿಯಲ್ಲಿ ತುಳುವೆರ್ ಕುಡ್ಲ (ರಿ) ನೂತನ ಸಂಘಟನೆಯ ಲೋಗೊ ಬಿಡುಗಡೆ ಮಾಡಿದರು.

ಇದೇ ವೇಳೆ ತುಳು ಭಾಷೆಯನ್ನು ಕರ್ನಾಟಕ ರಾಜ್ಯದ ಅಧಿಕೃತ ರಾಜ್ಯ ಭಾಷೆಯನ್ನಾಗಿ ಘೋಷಣೆ ಮಾಡುವಂತೆ ಮನವಿ ಸಲ್ಲಿಸಲಾಯಿತು. ಅಲ್ಲದೇ ತುಳು ಕೆಳಿಂಜ ಭಾರತ ಎನ್ನುವ ತುಳುನಾಡಿಗೆ ಸಂಬಂಧಪಟ್ಟ ಪುಸ್ತಕವನ್ನು ಕೊಟ್ಟು ಮುಖ್ಯಮಂತ್ರಿಗಳನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮಂಗಳೂರು ದಕ್ಷಿಣ ಶಾಸಕ ಡಿ. ವೇದವ್ಯಾಸ ಕಾಮತ್ ಹಾಗೂ ಮೂಡಬಿದ್ರೆ ಶಾಸಕ ಉಮಾನಾಥ್ ಕೋಟ್ಯಾನ್, ತುಳುವೆರ್ ಕುಡ್ಲ ಸಂಘಟನೆಯ ಅಧ್ಯಕ್ಷ ಪ್ರತೀಕ್ ಯು. ಪೂಜಾರಿ, ಕೋಶಾಧಿಕಾರಿ ಚರಿತ್ ಪೂಜಾರಿ, ಕಾರ್ಯದರ್ಶಿ ಪ್ರತೀಕ್ ರಾವ್, ಸಂಘಟನಾ ಸಂಚಾಲಕ ರೋಶನ್ ರೇನೊಲ್ಡ್, ಸಹ ಸಂಚಾಲಕ ಕುಷಿತ್, ವರುಣ್ ಆಚಾರ್ಯ ಉಪಸ್ಥಿತರಿದ್ದರು.

- Advertisement -

Latest News

error: Content is protected !!