- Advertisement -
- Advertisement -
ಮಂಗಳೂರು: ತುಳುನಾಡ ನೆನಪು ಫೇಸ್ಬುಕ್ ಗ್ರೂಪ್ ಕಳೆದ 9 ವರ್ಷಗಳಿಂದ ತುಳುನಾಡಿನ ಆಚಾರ ವಿಚಾರ, ಸಂಸ್ಕೃತಿ, ತುಳು ಭಾಷೆ, ತುಳು ಲಿಪಿ, ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯವನ್ನು ಮಾಡುತ್ತ ಬಂದಿದೆ.
ತುಳುಬಾಷೆಗೆ ಪ್ರಾಧ್ಯಾನತೆ ಕೊಟ್ಟು ತುಳುನಾಡಿನ ಕಳೆದು ಹೋದ ವಿಚಾರಗಳ ನೆನಪು ಮಾಡುತ್ತ, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ತುಳುವರನ್ನು ಒಗ್ಗೂಡಿಸಿ ಸತತ 3 ಸಲ ಕ್ರಿಕೆಟ್ ಪಂದ್ಯ ಕೂಟ ನಡೆಸಿ, ವಿವಿಧ ಬಗೆಯ ಅಯೋಜನೆಗಳನ್ನು ಮಾಡಿ ತುಳು ಸಂಸ್ಕೃತಿ ಜನರಿಗೆ ತಲುಪಿಸುವ ಮೂಲಕ ವಿಶಿಷ್ಟ ಹೆಜ್ಜೆಯನ್ನು ಇಟ್ಟಿದೆ.
ಪ್ರತಿಸಲ ಯಾವುದಾದರೂ ಸವಾಲ್ ಜನಗಳ ಮುಂದೆ ಇಟ್ಟು ಅದರಲ್ಲಿ ಗೆದ್ದವರಿಗೆ ಬಹುಮಾನ ಕೊಟ್ಟು ಪ್ರೋತ್ಸಾಹ ನೀಡುತ್ತಾ ಬಂದಿದೆ. ಈ ಸಲ ಖ್ಯಾತ ವಾಗ್ಮಿ, ತುಳು ಸಂಶೋಧಕ, ಶ್ರೀ ಗಣೇಶ್ ಅಮೀನ್ ಸಂಕಮಾರ್ ಇವರ ತೀರ್ಪುಗಾರಿಕೆಯಲ್ಲಿ ಎಲ್ಯ ಕಥೆ ಪಂಥ ಸವಾಲ್ ಎಂಬ ಕಥಾ ಸ್ಪರ್ಧೆಯನ್ನು ಹಮ್ಮಿಕೊಂಡಿದೆ.
- Advertisement -