Saturday, May 4, 2024
Homeಕರಾವಳಿತ್ರಿಕೋನ ಸಿನಿಮಾದ ಟೀಸರ್ ಗೆ ಫಿದಾ ಆದ ಸಿನಿ ಪ್ರಿಯರು

ತ್ರಿಕೋನ ಸಿನಿಮಾದ ಟೀಸರ್ ಗೆ ಫಿದಾ ಆದ ಸಿನಿ ಪ್ರಿಯರು

spot_img
- Advertisement -
- Advertisement -

ಬೆಂಗಳೂರು ಪ್ರತಿ ಬಾರಿ ಭಿನ್ನ ವಿಭಿನ್ನ ಕಥೆಗಳೊಂದಿಗೆ ಸಿನಿ ಪ್ರೇಕ್ಷಕರ ಮುಂದೆ ಬರುವ ರಾಜಶೇಖರ್ ಈ ಬಾರಿ ತ್ರಿಕೋನ ಕಥೆ ಹೇಳಲು ಬಂದಿದ್ದಾರೆ. ರಾಜಶೇಖರ್ ಕಥೆ ಬರೆದು ಬಂಡವಾಳ ಹಾಕಿರುವ ತ್ರಿಕೋನ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ಸಿನಿಮಾ ಅಭಿಮಾನಿಗಳ ಹೃದಯ ಗೆದ್ದಿದೆ.  ಸದ್ಯ ಯುಟ್ಯೂಬ್ ನಲ್ಲಿ ತ್ರಿಕೋನ ಟೀಸರ್ ಒಂದು ಲಕ್ಷಕ್ಕೂ ಹೆಚ್ಚು ವೀವ್ಸ್ ಪಡೆದು ಮುನ್ನುಗ್ಗುತ್ತಿದೆ. ಈ ಚಿತ್ರಕ್ಕೆ ರಾಜಶೇಖರ್ ಕಥೆ ಬರೆದಿದ್ದರೇ ಚಂದ್ರಕಾಂತ್ ಚಿತ್ರಕತೆ ಬರೆದು ನಿರ್ದೇಶಿಸಿದ್ದಾರೆ.

ಪೊಲೀಸ್ ಪರ್ಕಿ ಪ್ರೋಡಕ್ಷನ್ ಬ್ಯಾನರ್ ನಡಿ ಸಿನಿಮಾ ಮೂಡಿಬರುತ್ತಿದ್ದು, ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ಸಿನಿಮಾ ತಯಾರಾಗುತ್ತಿದೆ. ಸಿನಿಮಾದ ಹೆಸರೇ ಹೇಳುವಂತೆ ಇಂದು ಮೂರು ಕಥೆಗಳನ್ನ ಒಳಗೊಂಡ ಸಿನಿಮಾವಾಗಿದ್ದು, ಅಹಂ, ಶಕ್ತಿ ಮತ್ತು ತಾಳ್ಮೆ ಇವುಗಳ ಮೇಲೆ ಕಥೆ ನಿಂತಿದೆ. ಈ ಸಿನಿಮಾವನ್ನ ನಾಲ್ಕು ಹಂತದಲ್ಲಿ 50 ದಿನಗಳ ಕಾಲ ಬೆಂಗಳೂರು, ಸುಬ್ರಮಣ್ಯ, ಕಡಬ, ಪುತ್ತೂರು, ಮಂಗಳೂರು, ಸಕಲೇಶಪುರದಲ್ಲಿ ಶೂಟಿಂಗ್ ಮಾಡಲಾಗಿದೆ.

ಚಿತ್ರದಲ್ಲಿ ರಾಜ್ ವೀರ್, ಅಚ್ಯುತರಾವ್-ಸುಧಾರಾಣಿ, ಸುರೇಶ್ ಹೆಬ್ಳಿಕರ್-ಲಕ್ಷ್ಮೀಘಿ, ಸಾಧುಕೋಕಿಲ ಅವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.  ಬಾಡಿ ಬಿಲ್ಡಿಂಗ್ ನಲ್ಲಿ ಎರಡು ಬಾರಿ ಮಿ.ಕರ್ನಾಟಕ, ಒಮ್ಮೆ ಮಿ.ಇಂಡಿಯಾ ಪ್ರಶಸ್ತಿ ಪಡೆದಿರುವ ಬಳ್ಳಾರಿಯ ಮಾರುತೇಶ್ ನೆಗೆಟಿವ್ ಶೇಡ್ ನಲ್ಲಿ ಮಿಂಚಿದ್ದಾರೆ. ಇನ್ನ ಚಿತ್ರಕ್ಕೆ ಸುರೇಂದ್ರನಾಥ್ ಸಂಗೀತ ನೀಡಿದ್ದು, ಶ್ರೀನಿವಾಸ್  ಛಾಯಾಗ್ರಹಣ, ಜೀವನ್ ಪ್ರಕಾಶ್.ಎನ್ ಸಂಕಲನವಿದೆ.

ಇನ್ನು ಟೀಸರ್ ವಿಚಾರಕ್ಕೆ ಬಂದ್ರೆ  ಸದ್ಯ ರಿಲೀಸ್ ಆಗಿರುವ ಟೀಸರ್ ನಲ್ಲಿ ಹಿನ್ನೆಲೆ ಸಂಗೀತ, ಎಡಿಟಿಂಗ್ ಸಿನಿಮಾದ ಮೇಲಿನ ನಿರೀಕ್ಷೆಗಳನ್ನ ಹೆಚ್ಚಿಸಿವೆ.

- Advertisement -
spot_img

Latest News

error: Content is protected !!