Thursday, April 25, 2024
Homeತಾಜಾ ಸುದ್ದಿಮುಂಬೈ: ಭಾಂಡುಪ್ ಕೋವಿಡ್ ಆಸ್ಪತ್ರೆಯಲ್ಲಿ ಅಗ್ನಿ ಅವಘಡ, ಮೃತಪಟ್ಟವರ ಸಂಖ್ಯೆ 10ಕ್ಕೇರಿಕೆ

ಮುಂಬೈ: ಭಾಂಡುಪ್ ಕೋವಿಡ್ ಆಸ್ಪತ್ರೆಯಲ್ಲಿ ಅಗ್ನಿ ಅವಘಡ, ಮೃತಪಟ್ಟವರ ಸಂಖ್ಯೆ 10ಕ್ಕೇರಿಕೆ

spot_img
- Advertisement -
- Advertisement -

ಮುಂಬೈ: ದೇಶದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿನ ಕೋವಿಡ್-19 ಆಸ್ಪತ್ರೆಯೊಂದರಲ್ಲಿ ನಿನ್ನೆ ತಡರಾತ್ರಿ ಅಗ್ನಿ ದುರಂತ ಸಂಭವಿಸಿದ್ದು, ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 10ಕ್ಕೇರಿಕೆಯಾಗಿದೆ. 70ಕ್ಕೂ ಹೆಚ್ಚು ಮಂದಿ ಕೋವಿಡ್-19 ಸೋಂಕಿತರನ್ನು ರಕ್ಷಿಸಲಾಗಿದೆ.

ಮುಂಬೈನ ಭಾಂಡುಪ್​ನಲ್ಲಿರುವ ಡ್ರೀಮ್ಸ್ ಮಾಲ್​ನಲ್ಲಿ ಸ್ಥಾಪಿಸಲಾಗಿದ್ದ ಸನ್​ರೈಸ್ ಹಾಸ್ಪಿಟಲ್​​ನಲ್ಲಿ ರಾತ್ರಿ 12:30ರ ವೇಳೆಯಲ್ಲಿ ಈ ಅವಘಡವಾಗಿದೆ. ಈ ವೇಳೆ ಆಸ್ಪತ್ರೆಯಲ್ಲಿ 70ಕ್ಕೂ ಹೆಚ್ಚು ರೋಗಿಗಳು ಇದ್ದರೆನ್ನಲಾಗಿದೆ. ಬೆಂಕಿ ದುರಂತವಾದ ಬಳಿಕ ಬಹುತೇಕ ರೋಗಿಗಳನ್ನ ಕೂಡಲೇ ಸ್ಥಳಾಂತರ ಮಾಡಲಾಗಿದೆ. ಆದರೆ, ಬೆಂಕಿ ಹೊತ್ತಿಕೊಳ್ಳಲು ಕಾರಣ ಏನೆಂದು ಗೊತ್ತಾಗಿಲ್ಲ. ತನಿಖೆ ನಡೆಯುತ್ತಿದೆ.

ಮಾಲ್​ನಲ್ಲಿ ಕೋವಿಡ್ ಆಸ್ಪತ್ರೆ ಸ್ಥಾಪಿಸಿದ್ದಕ್ಕೆ ಬಹಳಷ್ಟು ಆಕ್ಷೇಪಗಳು ವ್ಯಕ್ತವಾಗಿವೆ. ಈ ವಿಷಯವಾಗಿ ಮುಂಬೈ ಮೇಯರ್ ಕೂಡ ಅಸಮಾಧಾನಗೊಂಡಿದ್ದಾರೆ. ಮಾಲ್​ನಲ್ಲಿ ಆಸ್ಪತ್ರೆ ಮಾಡಿದ್ದನ್ನು ತಾನು ಇದೇ ಮೊದಲು ನೋಡಿದ್ದಾಗಿ ಅವರು ಆಕ್ರೋಶ ಹೊರಹಾಕಿದ್ದು, ಈ ಸಂಬಂಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ಧಾರೆ.

- Advertisement -
spot_img

Latest News

error: Content is protected !!