Saturday, May 4, 2024
Homeತಾಜಾ ಸುದ್ದಿಎರಡು ರೈಲುಗಳ ಮುಖಾಮುಖಿ ಡಿಕ್ಕಿ: 32 ಪ್ರಯಾಣಿಕರು ಬಲಿ, 66 ಮಂದಿಗೆ ಗಾಯ

ಎರಡು ರೈಲುಗಳ ಮುಖಾಮುಖಿ ಡಿಕ್ಕಿ: 32 ಪ್ರಯಾಣಿಕರು ಬಲಿ, 66 ಮಂದಿಗೆ ಗಾಯ

spot_img
- Advertisement -
- Advertisement -

ಕೈರೊ: ದಕ್ಷಿಣ ಈಜಿಪ್ಟ್​ನಲ್ಲಿ ಎರಡು ರೈಲುಗಳು ಮುಖಾಮುಖಿ ಡಿಕ್ಕಿಯಾಗಿದ್ದು, ಈ ಭೀಕರ ಅವಘಡದಲ್ಲಿ ಕನಿಷ್ಠ 32 ಮಂದಿ ಪ್ರಯಾಣಿಕರು ಬಲಿಯಾಗಿದ್ದಾರೆ. 66 ಮಂದಿ ಗಾಯಗೊಂಡಿದ್ದಾರೆ. ಈಜಿಪ್ತ್​ ರಾಜಧಾನಿ ಕೈರೊದಿಂದ 460 ಕಿ.ಮೀ. ದೂರದಲ್ಲಿರುವ ಸೊಹಾಗ್ ವಲಯದ ತಹ್ತಾ ಜಿಲ್ಲೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಗಾಯಾಳುಗಳನ್ನು ಸುಮಾರು 12 ಕ್ಕೂ ಹೆಚ್ಚು ಅಂಬ್ಯುಲೆನ್ಸ್​ಗಳಲ್ಲಿ ಆಸ್ಪತ್ರೆಗೆ ಸಾಗಿಸಲಾಗಿದೆ.

ತಹ್ತಾದಿಂದ ಕೈರೊಕ್ಕೆ ತೆರಳುತ್ತಿದ್ದ ಎಕ್ಸಪ್ರೆಸ್ ರೈಲು ಹಾಗೂ ಕೈರೊಂದಿದ ತಹ್ತಾಕ್ಕೆ ತೆರಳುತ್ತಿದ್ದ ಪ್ಯಾಸೆಂಜರ್ ರೈಲು ಮುಖಾಮುಖಿ ಡಿಕ್ಕಿ ಸಂಭವಿಸಿ ಅಪಘಾತ ಉಂಟಾಗಿದೆ. ರೈಲು ಹಳಿಯ ಅಸಮರ್ಪಕ ನಿರ್ವಹಣೆಯೇ ಘಟನೆಗೆ ಕಾರಣ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

ಭೀಕರ ಅವಘಡ ಸಂಬಂಧ ಪ್ರತಿಕ್ರಿಯೆ ನೀಡಿರುವ ಅಲ್ಲಿನ ಆರೋಗ್ಯ ಸಚಿವರು ಇದು ದೇಶದಲ್ಲಿ ಇತ್ತೀಚೆಗೆ ಸಂಭವಿಸಿದ ಅತಿದೊಡ್ಡ ಮಾರಕ ಅಪಘಾತ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ಎರಡು ರೈಲುಗಳು ಮುಖಾಮುಖಿಯಾಗಿ ಗುದ್ದಿದ ರಭಸಕ್ಕೆ ಎರಡು ರೈಲಿನ ಹಲವು ಬೋಗಿಗಳು ಸಂಪೂರ್ಣ ಜಖಂಗೊಂಡಿವೆ.

2002 ರಲ್ಲಿ ಕೈರೊದಲ್ಲಿ ಸಂಭವಿಸಿದ್ದ ಭೀಕರ ರೈಲು ಅಪಘಾತದಲ್ಲಿ 373 ಜನ ಮೃತಪಟ್ಟಿದ್ದ ನಂತರ ಇದು ಈಜಿಪ್ತ್​ನಲ್ಲಿ ಸಂಭವಿಸಿದ ಅತಿ ದೊಡ್ಡ ಅಪಘಾತವಾಗಿದೆ.

- Advertisement -
spot_img

Latest News

error: Content is protected !!