Monday, April 29, 2024
Homeತಾಜಾ ಸುದ್ದಿಭಾವಿ ಪತಿಯೊಂದಿಗೆ ಕನ್ನಡದ ಕೋಗಿಲೆ ಅಖಿಲಾ ಪಜಿಮಣ್ಣುರ ಕ್ಯೂಟ್ ರೋಮ್ಯಾಂಟಿಕ್ ವಿಡಿಯೋ… ಫುಲ್ ವೈರಲ್

ಭಾವಿ ಪತಿಯೊಂದಿಗೆ ಕನ್ನಡದ ಕೋಗಿಲೆ ಅಖಿಲಾ ಪಜಿಮಣ್ಣುರ ಕ್ಯೂಟ್ ರೋಮ್ಯಾಂಟಿಕ್ ವಿಡಿಯೋ… ಫುಲ್ ವೈರಲ್

spot_img
- Advertisement -
- Advertisement -

ಸ್ಪೆಷಲ್ ಡೆಸ್ಕ್: ಕನ್ನಡದ ಮ್ಯೂಸಿಕ್ ರಿಯಾಲಿಟಿ ಶೋಗಳಿಂದ ಒಂದಷ್ಟು ಗಟ್ಟಿ ಪ್ರತಿಭೆಗಳು ಬೆಳಕಿಗೆ ಬಂದಿವೆ. ಅಂಥವರೆಲ್ಲ ಸಿನಿಮಾ ಸೇರಿದಂತೆ ನಾನಾ ಸ್ವರೂಪದಲ್ಲಿ ಸಂಗೀತ ಪ್ರೇಮಿಗಳನ್ನು ತಾಕುತ್ತಾ, ಮುದ ನೀಡುತ್ತಾ ಮುಂದುವರಿಯುತ್ತಿದ್ದಾರೆ. ಈ ರೀತಿಯ ಪ್ರತಿಭಾವಂತ ಗಾಯಕಿಯರ ಸಾಲಿಗೆ ಇತ್ತೀಚಿನ ಸೇರ್ಪಡೆ ದಕ್ಷಿಣ ಕನ್ನಡ ಮೂಲದ ಹುಡುಗಿ ಅಖಿಲಾ ಪಜಿಮಣ್ಣು. ಹೌದು ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ ಖ್ಯಾತ ಗಾಯನ ರಿಯಾಲಿಟಿ ಕಾರ್ಯಕ್ರಮದಲ್ಲಿ ಒಂದಾಗಿದ್ದ ‘ಕನ್ನಡ ಕೋಗಿಲೆ’ ಮೂಲಕ ಕನ್ನಡಿಗರ ಮನೆಮಾತಾಗಿದ್ದ ಗಾಯಕಿ ಅಖಿಲಾ ಪಜಿಮಣ್ಣು ಅವರು ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.

ಸುಮಧುರ ಕಂಠದ ಮೂಲಕ ಗಾನಪ್ರಿಯರ ಹೃದಯ ಗೆದ್ದಿದ್ದ ಅಖಿಲಾ, ತನ್ನದೆ ಆದ ಅಭಿಮಾನಿ ಬಳಗವನ್ನು ಕೂಡ ಹೊಂದಿದ್ದಾರೆ. ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತಿದ್ದ ‘ಕನ್ನಡ ಕೋಗಿಲೆ’ ಕಾರ್ಯಕ್ರಮದ ಮೂಲಕ ಪ್ರವರ್ಧಮಾನಕ್ಕೆ ಬಂದ ಅಖಿಲಾ, ಇತ್ತೀಚಿನ ದಿನಗಳಲ್ಲಿ ಕನ್ನಡದ ಚಿತ್ರರಂಗದ ಅಚ್ಚಳಿಯದ ಹಾಡುಗಳ ಕವರ್ ಸಾಂಗ್ ಮೂಲಕ ಸುದ್ದಿಯಲ್ಲಿದ್ದರು.

ಕನ್ನಡ ಸಿನಿಮಾ ಪ್ರೇಮಿಗಳು ಎಂದೂ ಮರೆಯದ ‘ಅಮೃತವರ್ಷಿಣಿ’ ಚಿತ್ರದ ಈ ಸುಂದರ ಬೆಳದಿಂಗಳ ಈ ತಂಪಿನ ಅಂಗಳದಲಿ’ ಹಾಡನ್ನು ತಮ್ಮದೇ ಶೈಲಿಯಲ್ಲಿ ಹಾಡಿ ಬಿಡುಗಡೆ ಮಾಡಿದ್ದರು. ಅಖಿಲಾ ಸ್ವರದಲ್ಲಿ ಮೂಡಿ ಬಂದಿರುವ ಈ ಹಾಡು ಯಥಾಪ್ರಕಾರ ಮತ್ತೆ ಮತ್ತೆ ಕೇಳಿ ಪುಳಕಗೊಳ್ಳುವಂತೆ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಇನ್ನು ಇದೀಗ ಈ ಬಹು ಸುಂದವಾರದ ಗಾಯಕಿ ಅಖಿಲಾ, ತಮ್ಮ ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ಧರಾಗಿದ್ದು, ಇತ್ತೀಚಿಗಷ್ಟೆ ಧನಂಜಯ್ ಶರ್ಮಾ ಎನ್ನುವವರ ಜೊತೆ ನಿಶ್ಚಿತಾರ್ಥ ಕೂಡ ಮಾಡಿಕೊಂಡಿದ್ದಾರೆ. ಎಂಗೇಜ್ ಮೆಂಟ್ ನ ಸುಂದರ ಕ್ಷಣಗಳ ವಿಡಿಯೋವನ್ನು ಅಖಿಲಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೂಡ ನೀಡಿದ್ದರು.

ತಮ್ಮ ಕುಟುಂಬ ವರ್ಗದವರು ಹಾಗೂ ತೀರ ಆಪ್ತರ ಸಮ್ಮುಖದಲ್ಲಿ ಅಖಿಲಾ ಹಾಗೂ ಧನಂಜಯ್ ಅವರ ನಿಶ್ಚಿತಾರ್ಥ ನಡೆದಿದ್ದು, ಅಖಿಲಾ ಕೈಹಿಡಿಯುತ್ತಿರುವ ಧನಂಜಯ್ ಶರ್ಮಾ ಯಾರು ಎನ್ನುವ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ ಮತ್ತು ಅಖಿಲಾ ಕೂಡ ತಮ್ಮ ಭಾವಿ ಪತಿಯ ಬಗ್ಗೆ ಎಲ್ಲಿಯೂ ಕೂಡ ಹೇಳಿಕೊಂಡಿಲ್ಲ. ಇನ್ನು ಸಾಮಾಜಿಕ ಜಾಲತಾಣದಲ್ಲಿ ಲವ್ ಮ್ಯಾರೇಜ್ ಅಥವಾ ಆರೆಂಜ್ ಮ್ಯಾರೇಜ್ ಎಂದು ಪ್ರಶ್ನೆಯನ್ನು ಅಭಿಮಾನಿಗಳು ಕೇಳುತ್ತಿದ್ದು, ಇದಕ್ಕೂ ಕೂಡ ಅಖಿಲಾ ಯಾವುದೇ ರೀತಿಯಲ್ಲಿ ಪ್ರತಿಕ್ರಿಯಿಸಿಲ್ಲ.

ಕನ್ನಡ ಕೋಗಿಲೆ ಬಳಿಕ ಅಖಿಲಾ ಮುಂಜಾನೆ ರಾಗ ಕಾರ್ಯಕ್ರಮದ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಬಂದಿರುವ ಅಖಿಲಾ ಇದೀಗ ತಮ್ಮ ಭಾವಿ ಪತಿ ಜೊತೆ ಒಂದು ಸುಂದರವಾರದ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ತಮ್ಮ ಪತಿಯೊಂದಿಗೆ ಅವರಂತೆ ವಿಡಿಯೋ ಬಂದಿರುವ ಅಖಿಲಾ, ಅಭಿಮಾನಿಗಳಿಗೆ ಖುಷಿ ತಂದಿದ್ದಾರೆ. ವಿಡಿಯೋ ನೋಡಿ.

- Advertisement -
spot_img

Latest News

error: Content is protected !!