Wednesday, May 15, 2024
Homeತಾಜಾ ಸುದ್ದಿಉಳವಿ ಕಾಡಲ್ಲಿ ಅಚ್ಚರಿಯ ಘಟನೆ.. ಮೇವಿಗೆಂದು ಹೋದ ದನದ ಬಾಲ ಹಿಡಿದ ಮರ.. ಅರಣ್ಯದಲ್ಲಿ ಇನ್ನೂ...

ಉಳವಿ ಕಾಡಲ್ಲಿ ಅಚ್ಚರಿಯ ಘಟನೆ.. ಮೇವಿಗೆಂದು ಹೋದ ದನದ ಬಾಲ ಹಿಡಿದ ಮರ.. ಅರಣ್ಯದಲ್ಲಿ ಇನ್ನೂ ಇವೆಯಾ ಪ್ರಾಣಿಭಕ್ಷಕ ಮರಗಳು?

spot_img
- Advertisement -
- Advertisement -

ಉತ್ತರಕನ್ನಡ : ನಮ್ಮ ಪ್ರಕೃತಿಯಲ್ಲಿ ಜರಗುವ ಕೆಲವೊಂದು ಘಟನೆಗಳನ್ನು ನಂಬೋದಾ ಇಲ್ಲಾ ಬಿಡೋದಾ ಅನ್ನೋ ಅನುಮಾನಗಳು ಕೆಲವೊಮ್ಮೆ ನಮ್ಮನ್ನು ಕಾಡುತ್ತವೆ. ಕೆಲವೊಂದು ಘಟನೆಗಳು ಅಯ್ಯೋ! ಹೀಗೂ ನಡೆಯುತ್ತಾ ಎಂಬ ಅನುಮಾನವನ್ನು ಹುಟ್ಟಿ ಹಾಕುತ್ತವೆ. ಇಂತಹದ್ದೇ ಘಟನೆಯೊಂದು ಉತ್ತರಕನ್ನಡ ಜಿಲ್ಲೆಯ ಜೋಯಿಡಾದಲ್ಲಿ ನಡೆದಿದೆ.

ಜೋಯಿಡಾದ ಉಳವಿ ಸಮೀಪದ ಹನ್ನೊಲ್ಲಿ ಕಾಡಿನಲ್ಲಿ ಎರಡು ದಿನಗಳ ಹಿಂದೆ ಅಚ್ಚರಿಯ ಘಟನೆಯೊಂದು ನಡೆದಿದೆ. ಉಳವಿ ಸಮೀಪದ ಹನ್ನೊಲ್ಲಿ ಕಾಡಿಗೆ ಎಂದಿನಂತೆ ಮೇಯೋದಕ್ಕೆ ಅಂತಾ ದನಕರುಗಳು ಹೋಗಿವೆ.ಅದರಲ್ಲಿ ಒಂದು ಆಕಳಿನ ಬಾಲ ಕಾಡಿನ ಮರವೊಂದಕ್ಕೆ ಸ್ಪರ್ಶಿಸುತ್ತಿದ್ದಂತೆ ಮರ ಆಕಳಿನ ಬಾಲವನ್ನು ಸೆಳೆದುಕೊಂಡಿದೆ. ಆಕಳು ಅದರಿಂತ ತಪ್ಪಿಸಿಕೊಳ್ಳಲು ಎಷ್ಟೇ ಪ್ರಯತ್ನ ಮಾಡಿದರೂ ಸಾಧ್ಯವಾಗಿಲ್ಲ. ಹಾಗಾಗಿ ರಾತ್ರಿ ಆದರೂ ಅಲ್ಲೇ ಬಾಕಿಯಾಯಿತು.

ಇನ್ನು ಉಳಿದ ದನಕರುಗಳು ಬಂದರೂ ಈ ದನ ಮಾತ್ರ ಯಾಕೆ ಬಂದಿಲ್ಲ ಅಂತಾ ಮನೆಯವರು ಹುಡುಕಾಡಿದ್ದಾರೆ. ಆಗ ಕಾಡಿನಲ್ಲಿ ಮರಕ್ಕೆ ದನದ ಬಾಲ ಸಿಕ್ಕಿ ಹಾಕಿಕೊಂಡಿರುವ ವಿಚಾರ ಗೊತ್ತಾಗಿದೆ. ಕೂಡಲೇ ಸ್ಥಳೀಯರು ವಾಹನದ ಕೀ ಯಿಂದ ಬಾಲ ಸುತ್ತಿಕೊಂಡ ಗಿಡದ ಭಾಗವನ್ನು ಚುಚ್ಚಿದ್ದಾರೆ. ಚುಚ್ಚುತ್ತಿದ್ದಂತೆ ಬಾಲ ಸಡಿಲಗೊಂಡಿದೆ. ಕೇಳೋದಕ್ಕೆ ಇದು ಅಚ್ಚರಿ ಎನಿಸಿದರೂ ನಂಬಲೇ ಬೇಕಾದ ಸತ್ಯವಾಗಿದೆ ಇದು. ಇದನ್ನೆಲ್ಲಾ ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ವಿಡಿಯೋ ಮಾಡಿದ್ದಾರೆ.

ಇನ್ನು ಕಾಡಿನಲ್ಲಿ ಪ್ರಾಣಿಭಕ್ಷಕ ಮರಗಳು ಇರುತ್ತವೆ. ಅವುಗಳು ದನಕರುಗಳನ್ನು ಹಿಡಿಯುತ್ತವೆ ಅನ್ನೋದನ್ನು ನಾವು ಕೇಳಿದ್ದೇವೆ. ನಮ್ಮ ಹಿರಿಯರು ಈ ಬಗ್ಗೆ ಹೇಳುತ್ತಿದ್ದರು. ಆದರೆ ಇದೀಗ ನಾವೇ ಇಂತಹ ಘಟನೆಯನ್ನು ನೋಡುವಂತಾಯಿತು ಎಂದು ಸ್ಥಳೀಯರು ಹೇಳಿದ್ದಾರೆ.

ಜೊಯಿಡಾದ ಉಳವಿ ಕಾಡಿನಲ್ಲಿ ವಿಚಿತ್ರ ಘಟನೆ, ಆಕಳಿನ ಬಾಲ ಸುತ್ತಿಕೊಂಡ ಕಾಡಿನ ಗಿಡ…

Posted by Maha Xpress on Friday, 17 July 2020

- Advertisement -
spot_img

Latest News

error: Content is protected !!