Wednesday, May 1, 2024
Homeಕರಾವಳಿಎಂಜಿರ: ಕೊರೋನಾದಿಂದಾಗಿ ಜಮೀನಿನ ಮಾಲೀಕ ಬೆಂಗಳೂರಿನಲ್ಲಿ ಬಾಕಿ, ಜಾಗ ಒತ್ತುವರಿ ಮಾಡಿ ಕಟ್ಟಡ ಕಟ್ಟಿದ ಸ್ಥಳೀಯ...

ಎಂಜಿರ: ಕೊರೋನಾದಿಂದಾಗಿ ಜಮೀನಿನ ಮಾಲೀಕ ಬೆಂಗಳೂರಿನಲ್ಲಿ ಬಾಕಿ, ಜಾಗ ಒತ್ತುವರಿ ಮಾಡಿ ಕಟ್ಟಡ ಕಟ್ಟಿದ ಸ್ಥಳೀಯ ನಿವಾಸಿ ವಿಶ್ವನಾಥ ಕೆ !

spot_img
- Advertisement -
- Advertisement -

ಎಂಜಿರ: ಕೊರೋನಾ ಲಾಕ್ ಡೌನ್ ನಿಂದಾಗಿ ಬೆಂಗಳೂರಿನಲ್ಲಿ ವಾಸವಿರುವ ಮೂಲತಃ ಬೆಳ್ತಂಗಡಿ ತಾಲೂಕಿನ ರೆಖ್ಯಾ ಗ್ರಾಮದ ಎಂಜಿರದ ಪ್ರದೀಪ್ ಭಟ್ ಬೆಂಗಳೂರಿನಲ್ಲೇ ವಾಸವಾಗಿದ್ದರು. ಈ ಸಮಯದ ಲಾಭ ಪಡೆಯಲು ಉದ್ದೇಶಿಸಿದ್ದ ಸ್ಥಳೀಯ ನಿವಾಸಿ ಮತ್ತು ಕ್ರಿಮಿನಲ್ ಹಿನ್ನಲೆಯುಳ್ಳ ಚಡ್ಡಿ ಬಾಲ ಅಲಿಯಾಸ್ ಬಾಲಕೃಷ್ಣ ಕೆ ಜಾಗವನ್ನು ಅಕ್ರಮವಾಗಿ ಸ್ವಾದೀನ ಪಡಿಸಿ ಜಾಗದಲ್ಲಿ ಅನಧಿಕೃತ ವಾಣಿಜ್ಯ ಕಟ್ಟಡ ಮತ್ತು ಅದರೊಂದಿಗೆ ಮನೆಯನ್ನು ನಿರ್ಮಿಸಲು ಪ್ರಯತ್ನಿಸಿದ ಘಟನೆ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ 75ರ ಮಾರ್ಜಿನ್ ನಲ್ಲೆ ಬರುವ ರಸ್ತೆ ಪರಂಬೋಕು ಜಾಗದಲ್ಲಿ ವಿಶ್ವನಾಥ ಕಟ್ಟಡ ನಿರ್ಮಿಸುತ್ತಿರುವ ಬಗ್ಗೆ ಈ ಹಿಂದೆಯೇ ಸಾರ್ವಜನಿಕರಿಂದ ಅನೇಕ ಬಾರಿ ಕಂದಾಯ ಇಲಾಖೆಗೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ದೂರು ದಾಖಲಾಗಿತ್ತು. ಈ ಕುರಿತು ಸಂಬಂಧಪಟ್ಟ ಇಲಾಖೆಗಳಿಂದ ನಿರ್ಮಾಣ ಕಾರ್ಯ ಸ್ಥಗಿತ ಗೊಳಿಸಲು ನೋಟಿಸ್ ನೀಡಿದರು ಕ್ಯಾರೇ ಎನ್ನದೆ ವಿಶ್ವನಾಥ ತನ್ನ ಕೆಲಸಗಳನ್ನು ಸರಾಗವಾಗಿ ಮಾಡುತ್ತಿದ್ದ ಎನ್ನಲಾಗಿದೆ.

ಜಾಗದ ಮಾಲೀಕರಿಗೆ ಬೆದರಿಕೆ ಕರೆ
ಬೆಂಗಳೂರಿನಲ್ಲಿ ವಾಸವಿರುವ ಮಾಲೀಕರು ಈ ಕುರಿತು ಅನೇಕ ಬಾರಿ ಬಾಲಕೃಷ್ಣನ ಜೊತೆ ಸಂವಾದ ನಡೆಸಿದಾಗಲೂ ಮಾಲೀಕರಿಗೆ ದೂರವಾಣಿಯಲ್ಲಿ ಜೀವ ಬೆದರಿಕೆ ನೀಡಿದ್ದ. ಮತ್ತು ಸ್ಥಳೀಯ ಉದ್ಯಮಿಯೊಬ್ಬರಿಂದ ಫೋನ್ ಮಾಡಿಸಿ ಜಾಗವನ್ನು ಬಾಲಕೃಷ್ಣನಿಗೆ ಬಿಟ್ಟುಕೊಡುವಂತೆ ಧಮ್ಕಿ ಹಾಕಿದ ಘಟನೆ ಕೂಡ ನಡೆದಿದೆ.

ಯಾರು ಈ ಚಡ್ಡಿ ಬಾಲ ?
ರೆಖ್ಯಾ ಗ್ರಾಮದ ಕಟ್ಟೆ ನಿವಾಸಿಯಾಗಿರುವ ಬಾಲಕೃಷ್ಣ ಕೆ ಊರಿನಲ್ಲಿ ಚಡ್ಡಿ ಬಾಲ ಎಂದೇ ಚಿರಪರಿಚಿತ. ಈ ಹಿಂದೆ ರಾತ್ರಿ ವೇಳೆ ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ವಾಹನಗಳಿಂದ ಡೀಸೆಲ್ ಕಳ್ಳತನ, ಲಾರಿಯ ಡ್ರೈವರ್ ಗಳಿಂದ ನಗದು ದರೋಡೆ, ಯುವತಿಯ ಮಾನಭಂಗ ಯತ್ನ, ಯುವಕನ ಮೇಲೆ ಹಲ್ಲೆ ಹೀಗೆ ಹಲವು ಪೊಲೀಸ್ ಪ್ರಕರಣಗಳು ಬಾಲಕೃಷ್ಣ ಕೆ ವಿರುದ್ಧ ದಾಖಲಾಗಿವೆ.

ತಾನು ಆರ್.ಟಿ.ಓ ಬ್ರೋಕರ್ ಎಂದು ಊರಿನಲ್ಲಿ ಗುರುತಿಸಿಕೊಳ್ಳುವ ಈತ ಊರಿನಲ್ಲಿ ಅನೇಕ ರೀತಿಯ ದುಷ್ಕೃತ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾನೆ ಎನ್ನಲಾಗಿದೆ.

- Advertisement -
spot_img

Latest News

error: Content is protected !!