Wednesday, June 3, 2026
Homeಕರಾವಳಿಮಂಗಳೂರುಕಡಬ: ನೂಜಿಬಾಳ್ತಿಲ ಬಳಿ ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಮರ

ಕಡಬ: ನೂಜಿಬಾಳ್ತಿಲ ಬಳಿ ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಮರ

- Advertisement -
- Advertisement -

ಕಡಬ: ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದ ಘಟನೆ ಪೆರಿಯಶಾಂತಿಯನ್ನು ಸಂಪರ್ಕಿಸುವ ಹೆದ್ದಾರಿಯ ನೂಜಿಬಾಳ್ತಿಲ ಸಮೀಪದ ಕನ್ವಾರೆ ಎಂಬಲ್ಲಿ ಮೇ. 25 ರಂದು ಮಧ್ಯಾಹ್ನ ನಡೆದಿದೆ.

ಕುಕ್ಕೆ ಸುಬ್ರಹ್ಮಣ್ಯ ಭಾಗದಿಂದ ಇಚ್ಚಂಪಾಡಿ ಮೂಲಕ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಕಾರಿನ ಮೇಲೆ ಮರ ಬಿದ್ದಿದೆ. ಕಾರಿನಲ್ಲಿದ್ದ ಚಾಲಕ, ಇಬ್ಬರು ಮಹಿಳೆಯರು, ಒಂದು ಮಗು ಕಾರಿನಲ್ಲಿ ಸಿಲುಕಿಕೊಂಡಿದ್ದು ಸ್ಥಳೀಯರು ಕಾರ್ಯಾಚರಣೆ ನಡೆಸಿ ಸಿಲುಕಿದ್ದ ಗಾಯಾಳುಗಳನ್ನು ಹೊರ ತೆಗೆದು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಿದ್ದಾರೆ.

ಸ್ಥಳದಲ್ಲಿದ್ದವರ ಮಾಹಿತಿ ಪ್ರಕಾರ ಕಾರಿನಲ್ಲಿದ್ದವರ ಮುಖ, ಮೈ-ಕೈಗೆ ತೀವ್ರ ತರಹದ ರಕ್ತ ಗಾಯವಾಗಿದೆ ಎಂದು ತಿಳಿದು ಬಂದಿದೆ. ಈ ರಸ್ತೆಯಲ್ಲಿ ಕೆಲ ಕಾಲ ವಾಹನ ಸಂಚಾರಕ್ಕೆ ತಡೆ ಉಂಟಾಯಿತು. ಘಟನೆಯಲ್ಲಿ ಕಾರು ಸಂಪೂರ್ಣ ಜಖಂಗೊಂಡಿದೆ. ಸ್ಥಳೀಯರು ಮರ ತೆರವಿಗೆ ಸಹಕರಿಸಿದ್ದಾರೆ.ಕಾರಿನಲ್ಲಿದ್ದವರ ವಿವರ ಇನ್ನಷ್ಟೇ ತಿಳಿದು ಬರಬೇಕಿದೆ.

- Advertisement -

Latest News

error: Content is protected !!