Thursday, June 4, 2026
Homeಕರಾವಳಿಸುಬ್ರಮಣ್ಯ; ಬುಡ ಸಮೇತ ರಸ್ತೆಗೆ‌ ಉರುಳಿದ ಮರ: ಕೂದಲೆಳೆ ಅಂತರದಲ್ಲಿ ಪಾರಾದ ಕಾರು ಚಾಲಕ

ಸುಬ್ರಮಣ್ಯ; ಬುಡ ಸಮೇತ ರಸ್ತೆಗೆ‌ ಉರುಳಿದ ಮರ: ಕೂದಲೆಳೆ ಅಂತರದಲ್ಲಿ ಪಾರಾದ ಕಾರು ಚಾಲಕ

- Advertisement -
- Advertisement -

ಸುಬ್ರಹ್ಮಣ್ಯ: ಹೆದ್ದಾರಿ ಬದಿಯಲ್ಲಿದ್ದ ಬೃಹತ್ ಮರವೊಂದು ಬುಡ ಸಮೇತ ರಸ್ತೆಗೆ ಉರುಳಿ ಬಿದ್ದು, ಕಾರು ಚಾಲಕ ಕೂದಲೆಳೆ ಅಂತರದಲ್ಲಿ ಪಾರಾದ ಘಟನೆ ಸುಬ್ರಹ್ಮಣ್ಯ ಸಮೀಪದ ಕುಮಾರಧಾರ ಬಳಿಯ ವಲಯಾರಣ್ಯ ಕಚೇರಿ ಸಮೀಪ ಭಾನುವಾರ ನಡೆದಿದೆ.

ಪೆರ್ಲಂಪಾಡಿ ಅಜಿತ್ ಎಂಬುವರು ಬೆಂಗಳೂರಿಗೆ ತೆರಳುವ ವೇಳೆ ಹೆದ್ದಾರಿ ಬದಿಯ ಬೃಹತ್ ಮರ ಉರುಳಿದೆ . ಮರ ಬೀಳುವುನ್ನು ಗಮನಿಸಿ ಕೂಡಲೇ ಬ್ರೇಕ್ ಹಾಕಿ ಕಾರು ನಿಲ್ಲಿಸಿದ್ದು, ಈ ವೇಳೆ ಮರ ಹೆದ್ದಾರಿಗೆ ಉರುಳಿ ಬಿದ್ದಿದೆ. ಕಾರಿಗೆ ಸ್ವಲ್ಪ ಹಾನಿಯಾಗಿದೆ.

ಮರ ಬಿದ್ದ ಪರಿಣಾಮ ಹೆದ್ದಾರಿ ತಡೆ ಉಂಟಾಗಿದ್ದು, ರಸ್ತೆಯ ಎರಡೂ ಬದಿಯಲ್ಲೂ ಕಿ.ಮೀ. ಉದ್ದ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಬಳಿಕ ಮರ ತೆರವು ಕಾರ್ಯ ನಡೆಸಿ ಸಂಚಾರಕ್ಕೆ ಅನುವು ಮಾಡಲಾಯಿತು. ಸುಬ್ರಹ್ಮಣ್ಯ ಪೊಲೀಸರು, ಸುಬ್ರಹ್ಮಣ್ಯ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ಸ್ಥಳೀಯರು ಸಹಕರಿಸಿದರು.

- Advertisement -

Latest News

error: Content is protected !!