- Advertisement -
![]()
- Advertisement -
ಬೆಳ್ತಂಗಡಿ; ಮನೆ ಮೇಲೆ ಮರ ಬಿದ್ದು ವೃದ್ಧೆ ಗಂಭೀರ ಗಾಯಗೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಗ್ರಾಮದ ಆದರ್ಶ ನಗರದಲ್ಲಿ ನಡೆದಿದೆ.

ಕಮಲ(75) ಗಂಭೀರ ಗಾಯಗೊಂಡ ವೃದ್ಧೆ.ವೃದ್ಧೆಯ ಕೈ ಮತ್ತು ಕಾಲಿಗೆ ಗಂಭೀರ ಗಾಯವಾಗಿದೆ. ಬೆಳ್ತಂಗಡಿ ಸರಿಕಾರಿ ಆಸ್ಪತ್ರೆಯಲ್ಲಿ ವೃದ್ಧೆಗೆ ಚಿಕಿತ್ಸೆ ನೀಡಲಾಗಿದೆ.

ಮನೆಯಲ್ಲಿ ಒಟ್ಟು ಮೂರು ಜನರಿದ್ದರು ಇಬ್ಬರು ಪ್ರಣಾಪಾಯದಿಂದ ಪಾರಾಗಿದ್ದಾರೆ.
ಮನೆಯಲ್ಲಿ ಅಜ್ಜಿ ಹಾಗೂ ಮೊಮ್ಮಕ್ಕಳಾದ ಪವಿತ್, ಪರೀಕ್ಷಿತಾ ಮೂವರಿದ್ದಾಗ ದೂಪದ ಮರ ಮನೆ ಮೇಲೆ ಅನಾಹುತ ಸಂಭವಿಸಿದೆ. ಘಟನೆಯಲ್ಲಿ ಪರೀಕ್ಷಿತಾಳಿಗೂ ಸಣ್ಣ ಪುಟ್ಟ ಗಾಯಗಳಾಗಿವೆ.
ಘಟನಾ ಸ್ಥಳಕ್ಕೆ ಮತ್ತು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಾಮ್, ಕಂದಾಯ ನಿರೀಕ್ಷಕ ಪ್ರತೀಷ್ , ಗ್ರಾಮ ಲೆಕ್ಕಿಗಾ ಸಿದ್ದೇಶ್ ಭೇಟಿ ಮಾಡಿ ಪರಿಶೀಲನೆ ನಡೆಸಿದ್ದಾರೆ.
- Advertisement -


