Wednesday, June 3, 2026
Homeಕರಾವಳಿಚಾರ್ಮಾಡಿ ಘಾಟಿನ ಅಣ್ಣಪ್ಪ ಗುಡಿಯ ಬಳಿ ಸಾರ್ವಜನಿಕ ಶೌಚಾಲಯಕ್ಕೆ ಮರ ಬಿದ್ದು ಹಾನಿ

ಚಾರ್ಮಾಡಿ ಘಾಟಿನ ಅಣ್ಣಪ್ಪ ಗುಡಿಯ ಬಳಿ ಸಾರ್ವಜನಿಕ ಶೌಚಾಲಯಕ್ಕೆ ಮರ ಬಿದ್ದು ಹಾನಿ

- Advertisement -
- Advertisement -

ಚಾರ್ಮಾಡಿ ಘಾಟಿಯ ಅಣ್ಣಪ್ಪ ಗುಡಿಯ ಬಳಿ ಸಾರ್ವಜನಿಕ ಶೌಚಾಲಯಕ್ಕೆ ಮರ ಬಿದ್ದು ಹಾನಿಯಾಗಿದೆ. ಶೌಚಾಲಯದ ಮೇಲ್ಛಾವಣಿ ದ್ವಂಸವಾಗಿದೆ.  

ಕಳೆದ ಕೆಲವು ತಿಂಗಳುಗಳ ಹಿಂದೆ ಪಾದಯಾತ್ರಿಕರಿಗಾಗಿ ಶೌಚಾಲಯದ ಮುಂಭಾಗದಲ್ಲಿ ಹೊಸ ಶೀಟುಗಳನ್ನು ಹಾಕಿ ದುರಸ್ತಿ ಮಾಡಲಾಗಿತ್ತು.ಮಹಿಳೆಯರಿಗೆ ಹಾಗೂ ಗಂಡಸರಿಗೆ ಪ್ರತ್ಯೇಕ ತಡೆ ಶೀಟುಗಳನ್ನು ಹಾಕಿ ಅನುಕೂಲ ಮಾಡಿ ಕೊಡಲಾಗಿತ್ತು.ಆದರೆ ಪಕ್ಕದಲ್ಲಿ ಬೃಹತ್ತಾದ ಮರ ಬಿದ್ದು ಮೇಲ್ಛಾವಣಿ ಹಾಗೂ ತಡೆ ಶೀಟುಗಳು ಧ್ವಂಸವಾಗಿ ಹಾನಿಯಾಗಿದೆ.ಸ್ಥಳಕ್ಕೆ ಉಪ ವಲಯ ಅರಣ್ಯ ಅಧಿಕಾರಿ ಬಸವರಾಜ್,ಅರಣ್ಯರಕ್ಷಕ ಅಭಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.

- Advertisement -

Latest News

error: Content is protected !!