Friday, July 11, 2025
Homeಕರಾವಳಿಉಡುಪಿಕುಂದಾಪುರ: ವಿಶ್ವದ ಎರಡನೇ ಎತ್ತರದ ಮೋಟಾರು ಮಾರ್ಗದ ತುತ್ತತುದಿಗೆ ಸಂಚಾರ: ಮಹಿಳೆಯ ಅಪೂರ್ವ ಸಾಧನೆಗೆ ಎಲ್ಲೆಡೆ...

ಕುಂದಾಪುರ: ವಿಶ್ವದ ಎರಡನೇ ಎತ್ತರದ ಮೋಟಾರು ಮಾರ್ಗದ ತುತ್ತತುದಿಗೆ ಸಂಚಾರ: ಮಹಿಳೆಯ ಅಪೂರ್ವ ಸಾಧನೆಗೆ ಎಲ್ಲೆಡೆ ಶ್ಲಾಘನೆ

spot_img
- Advertisement -
- Advertisement -

ಕುಂದಾಪುರ:. ಕುಂದಾಪುರ ಮೂಲದ ಮಹಿಳೆ ವಿಲ್ಮಾ ಕ್ರಾಸ್ಟೊ ಕರ್ವಾಲೊ(54) ವಿಶ್ವದ 2ನೇ ಎತ್ತರದ ಮೋಟಾರು ಮಾರ್ಗವಾದ ಲಡಾಖ್‌ನ 17,982 ಅಡಿ ಎತ್ತರದ ಖರ್ದುಂಗ್ಲಾ ಪಾಸ್‌ನ ತುತ್ತತುದಿಗೆ ಬೈಕ್‌ನಲ್ಲಿ ತಲುಪುವ ಮೂಲಕ ಹೊಸ ಸಾಧನೆಗೈದಿದ್ದಾರೆ. ಈ ಮೂಲಕ, ಈ ಹಿಂದೆ ಅರ್ಧಕ್ಕೆ ಕೈ ಬಿಟ್ಟಿದ್ದ ಪ್ರಯತ್ನವನ್ನು ಮುಂದುವರಿಸಿ ಯಶಸ್ವಿಯಾಗಿದ್ದಾರೆ.

ಕುಂದಾಪುರದ ರಾಜಕೀಯ ಮುತ್ಸದ್ಧಿ ದಿ| ಎಡ್ವಿನ್‌ ಕ್ರಾಸ್ಟೊ ಹಾಗೂ ಪುರಸಭಾ ಮಾಜಿ ಉಪಾಧ್ಯಕ್ಷೆ ಲಿಯೋನೆಲ್ಲಾ ಕ್ರಾಸ್ಟೊ ಅವರ ಪುತ್ರಿಯಾಗಿರುವ ವಿಲ್ಮಾ, ಲೆಸ್ಲಿ ಕರ್ವಾಲೊ ಅವರ ಧರ್ಮಪತ್ನಿ. ಕುಂದಾಪುರದ ಭಂಡಾರ್‌ಕಾರ್ಸ್‌ ಕಾಲೇಜಿನ ಹಳೇ ವಿದ್ಯಾರ್ಥಿಯಾಗಿದ್ದಾರೆ. ಪರ್ವತಾರೋಹಣ ಮತ್ತು ಬೈಕಿಂಗ್ ಇವರ ಹವ್ಯಾಸವಾಗಿದ್ದು, ಇದೀಗ ಅಪ್ರತಿಮ ಸಾಹಸ ಮರೆದಿದ್ದಾರೆ.

54 ವರ್ಷದ ವಿಲ್ಮಾ ಲೇಹ್‌ನಿಂದ ಪುತ್ರಿ ಚೆರಿಶ್‌ ಕರ್ವಾಲೊ ಜೊತೆ ಬೈಕ್‌ನಲ್ಲಿ ಹೊರಟಿದ್ದರು. ತಮ್ಮ ಸುಧೀರ್ಘ ಪ್ರಯಾಣದಲ್ಲಿ ಒಟ್ಟು 900 ಕಿ.ಮೀ. ಪ್ರಯಾಣಿಸಿದ್ದು, ಈ ಪೈಕಿ ಸುಮಾರು 500 ಕಿ.ಮೀ. ವರೆಗೆ ವಿಲ್ಮಾ ಅವರೇ ಬೈಕ್‌ ಚಲಾಯಿಸಿದ್ದರು .

- Advertisement -
spot_img

Latest News

error: Content is protected !!