Friday, June 5, 2026
Homeಕರಾವಳಿಸುಬ್ರಮಣ್ಯ; ಅಪ್ರಾಪ್ತೆ ಮೇಲೆ‌ ಅತ್ಯಾಚಾರ: ಯುವಕ‌  ಜೈಲುಪಾಲು

ಸುಬ್ರಮಣ್ಯ; ಅಪ್ರಾಪ್ತೆ ಮೇಲೆ‌ ಅತ್ಯಾಚಾರ: ಯುವಕ‌  ಜೈಲುಪಾಲು

- Advertisement -
- Advertisement -

ಸುಬ್ರಹ್ಮಣ್ಯ: ಅಪ್ರಾಪ್ತೆಯ ಮೇಲೆ ಅತ್ಯಾಚಾರ ಮಾಡಿದ‌ ಆರೋಪದಡಿ ಯುವಕನೋರ್ವ ಜೈಲುಪಾಲಾದ ಘಟನೆ   ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯಲ್ಲಿ‌ ನಡೆದಿದೆ.  

ಗುತ್ತಿಗಾರಿನ ಜಯಪ್ರಕಾಶ್ ಎಂಬಾತನೇ ಫೋಕ್ಸೋ ಪ್ರಕರಣದಲ್ಲಿ  ಜೈಲು ಪಾಲಾದ ಯುವಕ.  ದುಗಲಡ್ಕದ ಅಪ್ರಾಪ್ತ ಬಾಲಕಿ ಜ.11 ರಂದು ಸುಳ್ಯ ಜಾತ್ರೆಗೆ ಸಂಬಂಧಿಕರೊಂದಿಗೆ ತೆರಳಿದ್ದಳು. ಅಲ್ಲಿಂದ ಗುತ್ತಿಗಾರಿನ ತನ್ನ ಸಂಬಂಧಿಕರೊಂದಿಗೆ  ಗುತ್ತಿಗಾರಿಗೆ ತೆರಳಿದ್ದಳೆನ್ನಲಾಗಿದೆ.

ಈ ವೇಳೆ ಅಲ್ಲಿಯ ಸಂಬಂಧಿ ಜಯಪ್ರಕಾಶ್ ಎಂಬಾತ ಬಾಲಕಿಯನ್ನು ರಾತ್ರಿಯ ವೇಳೆ ಅತ್ಯಾಚಾರ ಮಾಡಿದ್ದಾಗಿ ಬಾಲಕಿಯ ತಂದೆ ಆ.21 ರಂದು ಸುಬ್ರಹ್ಮಣ್ಯ ಠಾಣೆಗೆ ದೂರು ನೀಡಿದ್ದರು. ಸುಬ್ರಹ್ಮಣ್ಯ ಪೊಲೀಸರು ಜಯಪ್ರಕಾಶ್ ನನ್ನು ಬಂಧಿಸಿ ವಿಚಾರಿಸಿ ಫೋಕ್ಸೋ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.ನ್ಯಾಯಾಲಯ ಆತನಿಗೆ ನ್ಯಾಯಾಂಗ ಬಂಧನ ವಿಧಿಸಿರುವುದಾಗಿ ತಿಳಿದುಬಂದಿದೆ.

- Advertisement -

Latest News

error: Content is protected !!