Sunday, June 7, 2026
Homeಕರಾವಳಿಉಡುಪಿಕುಂದಾಪುರ: ಹೊಸ ವರುಷದ ಪಾರ್ಟಿಗೆಂದು ಹೈದರಾಬಾದಿನಿಂದ ಕುಂದಾಪುರಕ್ಕೆ ಗಾಂಜಾ ಸಾಗಾಟ, ವ್ಯಕ್ತಿಯ ಬಂಧನ !

ಕುಂದಾಪುರ: ಹೊಸ ವರುಷದ ಪಾರ್ಟಿಗೆಂದು ಹೈದರಾಬಾದಿನಿಂದ ಕುಂದಾಪುರಕ್ಕೆ ಗಾಂಜಾ ಸಾಗಾಟ, ವ್ಯಕ್ತಿಯ ಬಂಧನ !

- Advertisement -
- Advertisement -

ಕುಂದಾಪುರ: 1 ಕೆಜಿ ತೂಕದ ಗಾಂಜಾವನ್ನು ಹೊಸ ವರ್ಷದ ಪಾರ್ಟಿಗೆಂದು ಸಾಗಿಸುತ್ತಿದ್ದ ಯುವಕನೊಬ್ಬನನ್ನು ಬಸೂರು ಮೂರುಕೈಯ ಬಸ್ಸು ನಿಲ್ದಾಣದ ಬಳಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿ ವಿಶ್ವ ಪ್ರಸನ್ನ ಗೋಡೆ ( 20 ). ಬಂಧಿತನಿಂದ 20,000 ರೂ . ಮೌಲ್ಯದ 1 ಕೆ.ಜಿ 84 ಗ್ರಾಂ ತೂಕದ ಗಾಂಜಾ , 250 ರೂ . ನಗದು ಹಾಗೂ ಒಂದು ಮೊಬೈಲನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಕುಂದಾಪುರ ಉಪ ವಿಭಾಗದ ಪೊಲೀಸ್ ಉಪನಿರೀಕ್ಷಕ ಶ್ರೀಕಾಂತ್ ಕೆ ಅವರು ರಾತ್ರಿ 8 ಗಂಟೆ ಸುಮಾರಿಗೆ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಬಸೂರಿನ ಮೂರುಕೈಯ ಬಸ್ಸು ನಿಲ್ದಾಣದ ಎದುರು ಅನುಮಾನಾಸ್ಪದವಾಗಿ ನಿಂತಿದ್ದ ಯುವಕನನ್ನು ವಿಚಾರಿಸಿದ್ದಾರೆ.


ಆಗ ಆತ ಆಟೋಗಾಗಿ ಕಾಯುತ್ತಿರುವುದಾಗಿ ತಿಳಿಸಿದ, ಅನುಮಾನಗೊಂಡು ಪೊಲೀಸರು ಆತನ ಬಳಿ ಇದ್ದ ಬ್ಯಾಗ್ ನ್ನು ಪರಿಶೀಲಿಸಿದಾಗ ಅದರಲ್ಲಿ ಗಾಂಜಾ ಪತ್ತೆಯಾಗಿದೆ .

ಹೈದರಾಬಾದ್ ನಿಂದ ಕುಂದಾಪುರಕ್ಕೆ ಹೊಸ ವರುಷದ ಪಾರ್ಟಿ ಮಾಡಲೆಂದು ಗಾಂಜಾ ತಂದಿದ್ದ ಎನ್ನಲಾಗಿದೆ. ಆತನ ಬಳಿ ಇದ್ದ ಗಾಂಜಾ ಹಾಗೂ ಇತರ ಸೊತ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು , ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .

- Advertisement -

Latest News

error: Content is protected !!