Saturday, June 6, 2026
Homeತಾಜಾ ಸುದ್ದಿರಾಜ್ಯ ಪೊಲೀಸ್‌ ಇಲಾಖೆಗೆ ಮೇಜರ್‌ ಸರ್ಜರಿ: 16 ಐಪಿಎಸ್ ಅಧಿಕಾರಿಗಳ ವರ್ಗಾವಣೆ

ರಾಜ್ಯ ಪೊಲೀಸ್‌ ಇಲಾಖೆಗೆ ಮೇಜರ್‌ ಸರ್ಜರಿ: 16 ಐಪಿಎಸ್ ಅಧಿಕಾರಿಗಳ ವರ್ಗಾವಣೆ

- Advertisement -
- Advertisement -

ಬೆಂಗಳೂರು : ರಾಜ್ಯ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಮಾಡಿರುವ ರಾಜ್ಯ ಸರಕಾರ 16 ಐಪಿಎಸ್ ಅಧಿಕಾರಿಗಳನ್ನು ವರ್ಗಾಯಿಸಿ ಆದೇಶ ಹೊರಡಿಸಿದೆ. ತಕ್ಷಣದಿಂದಲೇ ಈ ಆದೇಶ ಜಾರಿಯಾಗಲಿದೆ. ಅದರಂತೆ ಮಂಗಳೂರು ನಗರ ಕಾನೂನು ಸುವ್ಯವಸ್ಥೆ ಡಿಸಿಪಿ ಹರಿರಾಂ ಶಂಕರ್ ಅವರನ್ನು ಹಾಸನ ಎಸ್ ಪಿಯಾಗಿ ವರ್ಗಾವಣೆ ಮಾಡಲಾಗಿದೆ. ಬಂಟ್ವಾಳ ಉಪ ವಿಭಾಗ ಎಎಸ್ ಪಿ ಶ್ರೀನಿವಾಸು ರಾಜಪುತ್ ಅವರನ್ನು ಹುಮ್ನಾಬಾದ್ ಉಪ ವಿಭಾಗ ಎಎಸ್ ಪಿಯಾಗಿ ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿದೆ.

ಬೆಳಗಾವಿ ಜಿಲ್ಲೆಗೆ ನೂತನ ಎಸ್ಪಿಯಾಗಿ ಡಾ. ಸಂಜೀವ ಪಾಟೀಲ ಬರಲಿದ್ದಾರೆ. ಇದುವರೆಗೆ ಅವರು ಪಶ್ಚಿಮ ವಿಭಾಗದ ಡಿಸಿಪಿ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಬೆಳಗಾವಿ ಎಸ್ಪಿ ಆಗಿ ಕಾರ್ಯನಿರ್ವಹಿಸುತ್ತಿದ್ದ ಲಕ್ಷ್ಮಣ ನಿಂಬರ್ಗಿ ಅವರನ್ನು ಬೆಂಗಳೂರು ಡಿಸಿಪಿಯಾಗಿ ವರ್ಗಾವಣೆಗೊಳಿಸಲಾಗಿದೆ.

ಸಿ.ಕೆ.ಬಾಬಾ ಅವರನ್ನು ಆತ್ಮೀಯ ವಿಭಾಗಕ್ಕೆ ಎಸಿಬಿ ಎಸ್ಪಿ, ಕಲಾ ಕೃಷ್ಣಸ್ವಾಮಿ ಅವರನ್ನು ಪೂರ್ವ (ಸಂಚಾರ) ವಿಭಾಗದ ಡಿಸಿಪಿ ಆಗಿ ವರ್ಗಾವಣೆ ಮಾಡಲಾಗಿದೆ. ಸಿಸಿಬಿಗೆ ಶ್ರೀನಿವಾಸ್ ಗೌಡ, ಲೋಕಾಯುಕ್ತಕ್ಕೆ ಶ್ರೀನಾಥ ಮಹದೇವ ಜೋಶಿ, ಎಸಿಬಿಗೆ ಶೋಭಾರಾಣಿ, ಬೆಸ್ಕಾಂಗೆ ಶಾಂತರಾಜು ಅವರನ್ನು ವರ್ಗಾಯಿಸಿ ರಾಜ್ಯಸರ್ಕಾರ ಆದೇಶ ಹೊರಡಿಸಿದೆ.

- Advertisement -

Latest News

error: Content is protected !!