ಬೆಂಗಳೂರು : ಟ್ರಾಫಿಕ್ ಫೈನ್ ಕಟ್ಟಲು ಬಾಕಿ ಇರುವವರಿಗೆ ಇದೀಗ ಸಿಹಿ ಸುದ್ದಿ ಸಿಕ್ಕಿದೆ. ರಿಯಾಯಿತಿ ದರದಲ್ಲಿ ದಂಡ ಕಟ್ಟೋಕೆ ಅವಕಾಶ ಇದ್ರೂ ಕಟ್ಟೋಕೆ ಆಗ್ಲಿಲ್ಲ ಅಂತಾ ಬೇಜಾರು ಮಾಡ್ಕೊಂಡು ಮಂದಿಗೆ ಇದೀಗ ಮತ್ತೊಂದು ಛಾನ್ಸ್ ಸಿಕ್ಕಿದೆ. ಟ್ರಾಫಿಕ್ ಫೈನ್’ ರಿಯಾಯಿತಿಯನ್ನು ಮತ್ತೆ ಎರಡು ವಾರ ವಿಸ್ತರಣೆ ಮಾಡಲಾಗಿದೆ ಎಂದು ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ನ್ಯಾಯಮೂರ್ತಿ ಬಿ.ವೀರಪ್ಪ ಹೇಳಿದ್ದಾರೆ.
ನಮಗೆ ಶೇ. 50 ರ ರಿಯಾಯಿತಿ ವಿಸ್ತರಣೆ ಮಾಡುವಂತೆ ಮನವಿ ಬಂದಿತ್ತು, ಆದ್ದರಿಂದ ಟ್ರಾಫಿಕ್ ಫೈನ್ ರಿಯಾಯಿತಿಯನ್ನು ಮತ್ತೆ ಎರಡು ವಾರ ವಿಸ್ತರಣೆ ಮಾಡಲಾಗಿದೆ. ಇಂದು ಈ ಬಗ್ಗೆ ಅಧಿಕೃತ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ. ಈ ಮೂಲಕ ದಂಡ ಕಟ್ಟಲಿಕ್ಕಿರುವ ವಾಹನ ಸವಾರರಿಗೆ ಇನ್ನೂ 2 ವಾರ ಸಮಯ ಸಿಕ್ಕಿದಂತಾಗಿದೆ.
ಶೇ. 50 ರ ರಿಯಾಯಿತಿ ಸೌಲಭ್ಯದ ಮೂಲಕ ರಾಜ್ಯಾದ್ಯಂತ 9 ದಿನದಲ್ಲಿ 52.49 ಲಕ್ಷ ಕ್ಕೂ ಹೆಚ್ಚು ಕೇಸ್ ಗಳಿಂದ ಒಟ್ಟು 122.07 ಕೋಟಿ ರೂ. ದಂಡ ಸಂಗ್ರವಾಗಿದೆ.ಈ ಬಗ್ಗೆ ಸಂಚಾರ ಪೊಲೀಸ್ ಇಲಾಖೆಯಿಂದ ಮಾಹಿತಿ ನೀಡಲಾಗಿದ್ದು, ಸಂಚಾರಿ ದಂಡ ಪಾವತಿಯಲ್ಲಿ ಶೇ.50ರಷ್ಟು ರಿಯಾಯಿತಿ ಘೋಷಣೆಯಾದ ದಿನದಿಂದ ನಿನ್ನೆಯವರೆಗೆ 52.49 ಲಕ್ಷ ಪ್ರಕರಣಗಳಲ್ಲಿ 122.07 ಕೋಟಿ ರೂಪಾಯಿ ದಂಡ ಕಲೆಕ್ಷನ್ ಆಗಿದೆ. 50ರಷ್ಟು ರಿಯಾಯಿತಿಯಲ್ಲಿ ದಂಡ ಪಾವತಿಗೆ ಶನಿವಾರ ಕೊನೆ ದಿನವಾಗಿತ್ತು. ಕೊನೆಯ ದಿನ ಬೆಂಗಳೂರಿನಲ್ಲಿ 9.45 ಲಕ್ಷ ಪ್ರಕರಣಗಳಿಂದ 31.26 ಕೋಟಿ ರು. ದಂಡ ಸಂಗ್ರಹವಾಗಿದೆ.


